ಪುತ್ತೂರು: ಪುತ್ತೂರು ಹೊರವಲಯದ ಬಡಗನ್ನೂರಿನಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರೋರ್ವರನ್ನು ಕಟ್ಟಿ ಹಾಕಿ ಅವರ ತಾಯಿಯಲ್ಲಿದ್ದ ಚಿನ್ನವನ್ನು ದರೋಡೆ ಮಾಡಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಗ್ರಾಮಾಂತರ ಠಾಣೆ ದೂರು ದಾಖಲಾಗಿದೆ.

ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ಬಡಗನ್ನೂರು ಇವರ ಮನೆಗೆ ತಡ ರಾತ್ರಿ ಸುಮಾರು 10 ಜನರ ತಂಡವೊಂದು ಬಾಗಿಲು ಮುರಿದು ಒಳನುಗ್ಗಿ ಗುರು ಮತ್ತು ತಾಯಿಯ ಕೈ ಕಾಲು ಕಟ್ಟಿ ಹಾಕಿ ತಾಯಿಯಲ್ಲಿದ್ದ ಚಿನ್ನ ಮತ್ತು ಸ್ವಲ್ಪ ಹಣವನ್ನು ದೋಚಿದ್ದಾರೆ. ದರೋಡೆ ಮಾಡಿ ಹಿಂತಿರುಗುವಾಗ ಅವರ ಮೊಬೈಲ್ ಗಳನ್ನು ಬಾವಿ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ.
ಇಂದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಗುರು ಅವರ ತಾಯಿ ಸಂಬಂಧಿಕರಿಂದ ಚಿನ್ನದ ಸರ ಪಡೆದುಕೊಂಡು ಬಂದಿದ್ದರು. ಅದನ್ನೇ ದರೋಡೆಕೋರರು ದೋಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಲಭ್ಯವಾಗಲಿದೆ.
ಎಸ್ಪಿ ಸಿ ಬಿ ರಿಷ್ಯಂತ್ ಮತ್ತು ಪೋಲಿಸ್ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದೆ.



