ಲೊರೆಟ್ಟೊ ಮಾತಾ ಚರ್ಚಿನಲ್ಲಿ ಕನ್ಯಾ ಮಾತೆಯ ಹುಟ್ಟುಹಬ್ಬದ ದಿನವಾದ (ಮೊಂತಿ ಫೆಸ್ತ್ ) ತೆನೆಹಬ್ಬ ವನ್ನು ಭಕ್ತಿ ಪೂರ್ವಕವಾಗಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಚರ್ಚ್ ಧರ್ಮಗುರುಗಳಾದ ವ. ಫ್ರಾನ್ಸಿಸ್ ಕ್ರಾಸ್ತ , ಲೋರೆಟ್ಟೋ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂ. ಜೇಸನ್ ಮೋನಿಸ್ ಪ್ರಧಾನ ಧರ್ಮಗುರುಗಳಾಗಿ ಹಾಗೂ ವಂ ಪ್ರತಾಪ್ ನಾಯಕ್ ಬಲಿಪೂಜೆಯನ್ನು ಅರ್ಪಿಸಿದರು. ಚರ್ಚ್ ಧರ್ಮಗುರುಗಳು ದೆವರವಾಕ್ಯದ ಸಂದೇಶದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ತ್ಯಾಗಮಯ ಜೀವನದ ಬಗ್ಗೆ ಅರ್ಥ ಪೂರ್ಣ ಪ್ರವಚನ ನೀಡಿದರು.
ಪೂಜೆಯಲ್ಲಿ ಮಕ್ಕಳು,ಭಕ್ತಾದಿಗಳು ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡರು. ಕನ್ಯಾಮಾತೆಯ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು..ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಕ್ತಿಯಿಂದ ಎಲ್ಲಾರೂ ಪಾಲ್ಗೊಳ್ಳಲುಚರ್ಚ್ ವಠಾರದಲ್ಲಿ ಎಲ್ ಇ ಡಿ ಪರದೆಯನ್ನು ಅಳವಡಿಸಲಾಗಿತ್ತು. ಕಳೆದ 9 ದಿನಗಳಿಂದ ನಡೆದ ಮಾತೆ ಮರಿಯಮ್ಮನವರ ನೋವೆನಾ ಪ್ರಾರ್ಥನೆಗೆ ಮಕ್ಕಳು ಹೂಗಳನ್ನು ಅರ್ಪಿಸಿದರು ಹಾಗೆ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು . ವಿವಿಧಬಗೆಯ ಹೂಗಳನ್ನು ತಂದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸಂಭ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತೆನೆಯನ್ನು ನೀಡಿ ಗೌರವಿಸಲಾಯಿತು.
ಬಲಿ ಪೂಜೆ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಉಪಹಾರ , ಹಾಗೂ ಕಬ್ಬನ್ನು ನೀಡಲಾಯಿತು. ಮಾತೆ ಮರಿಯಮ್ಮನವರ ಪಲ್ಲಕ್ಕಿಯನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿ ನೇತೃತ್ವ ವಹಿಸಿದ್ದರು. ಧರ್ಮಗುರುಗಳು ಇಂದಿನ ಸಮಾರಂಭಕ್ಕೆ ಸಹಕರಿಸಿದ ಎಲ್ಲರನ್ನೂ ಧರ್ಮ ಗುರುಗಳು ಸ್ಮರಿಸಿ, ವಂದಿಸಿದರು
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…