ಕರಾವಳಿಯಲ್ಲಿ ಸದ್ಯ ಸೆನ್ಸೆಶನಲ್ ಕ್ರಿಯೇಟ್ ಮಾಡಿರುವ ಕೊಂಕಣಿಯ ಬಹು ನಿರೀಕ್ಷಿತ ಚಲನಚಿತ್ರ ‘ಆಸ್ಮಿತಾಯ್’ ಇದೇ ಬರುವ ಸೆಪ್ಟೆಂಬರ್ 15 ರಂದು ಭರ್ಜರಿ ಪ್ರದರ್ಶನ ಕಾಣಲಿದೆ ಎಂದು ಚಿತ್ರದ ಕಥೆಗಾರ ಕಥೆಗಾರ ಎರಿಕ್ ಒಝೇರಿಯೊ ಹೇಳಿದ್ದಾರೆ.

ಇವರು ಮಂಗಳೂರಿನಲ್ಲಿ ಚಿತ್ರತಂಡ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ, ಕೊಂಕಣಿಯ ಕಲೆ, ಸಾಹಿತ್ಯ, ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ, ಗಿನ್ನೆಸ್ ದಾಖಲೆ ಬರೆದ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ, ʼಅಸ್ಮಿತಾಯ್ʼ ಎಂಬ ಚಲನಚಿತ್ರವನ್ನು ನಿರ್ಮಿಸಿದೆ.
ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಈ ಕತೆ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಕೊಂಕಣಿಯ ವೈಭವವನ್ನು, ಸಾಂಪ್ರಾದಾಯವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ, ಈ ಸಿನೆಮಾವನ್ನು ಬರೆಯಲಾಗಿದೆ. ಈ ಚಿತ್ರಕ್ಕೆ ಜೊಯೆಲ್ ಪಿರೇರಾ ಅವರ ಚಿತ್ರಕತೆ ಮತ್ತು ಸಂಭಾಷಣೆ ಇದ್ದು, ಮೇವಿನ್ ಜೊಯೆಲ್ ಪಿಂಟೊರವರ ಸಂಕಲನವಿದೆ. ಆರು ಹಾಡುಗಳಿಗೆ ಆಲ್ವಿನ್ ಫೆರ್ನಾಂಡಿಸ್, ಕ್ಯಾಜೆಟನ್ ಡಾಯಸ್, ಜೊಯೆಲ್ ಪಿರೇರಾ ಹಾಗೂ ಎರಿಕ್ ಒಝೇರಿಯೊ ಮುದಗೊಳಿಸುವ ಸಂಗೀತ ರಚಿಸಿದ್ದು, ಪ್ರಸಿದ್ಧ ಗಾಯಕ ನಿಹಾಲ್ ಹಾಗೂ ಇತರ ಗಾಯಕರು ದನಿಗೂಡಿಸಿದ್ದಾರೆ.

ಇನ್ನೂ ಡೆನಿಸ್ ಮೊಂತರೂ, ಆಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್, ಪ್ರಿನ್ಸ್ ಜೇಕಬ್, ಸಾಯಿಶ್ ಪನಂದಿಕ, ಗೌರೀಶ್ ವರ್ಣಿಕರ್, ಸ್ಪ್ಯಾನಿ ಆಲ್ವಾರಿಸ್, ನಲ್ಲು ಪೆರ್ಮನ್ನೂರ್, ಸುನೀಲ್ ಸಿದ್ದಿ, ಲುಲು ಫೋರ್ಟಿಸ್, ನವೀನ್ ಲೋಬೊ ಸೇರಿದಂತೆ ಖ್ಯಾತ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ಸಪ್ಟೆಂಬರ್ 15 ರಿಂದ ಮಂಗಳೂರು, ಪುತ್ತೂರು, ಸೇರಿದಂತೆ ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣಲಿದೆ. ಎಂದರು.
ಸೆಪ್ಟೆಂಬರ್ 10 ರಂದು ಮಂಗಳೂರಿನ ಬಿಜೈ, ಪುತ್ತೂರು ಹಾಗೂ ಮಣಿಪಾಲದ ಭಾರತ್ ಸಿನಮಾದಲ್ಲಿ ಸಂಜೆ 4.00 ಗಂಟೆಗೆ ಏಕ ಕಾಲದಲ್ಲಿ ಮೂರು ಕಡೆ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ. ಇನ್ನೂ ಈ ಸಂದರ್ಭದಲ್ಲಿ ನಿರ್ಮಾಪಕ ಲುವಿಸ್ ಜೆ. ಪಿಂಟೊ, ಸಂಭಾಷಣೆಕಾರ ಜೊಯೆಲ್ ಪಿರೇರಾ, ಡೆನಿಸ್ ಬೊಂಪೇಲೊ, ಅಶ್ವಿಸ್ ಡಿಕೋಸ್ತಾ, ವೆನ್ಸಿಟಾ ಡಾಯಸ್, ನೆಲ್ಲು ಪೆರ್ಮನ್ನೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



