ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನದ ಶ್ರೀಗೋಪಾಲಕೃಷ್ಣ ಪಾಂಡುರಂಗ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆದಿದೆ.

ಪುಟ್ಟ ಪುಟ್ಟ ಪುಟಾಣಿಗಳು ಶ್ರೀ ಕೃಷ್ಣ ವೇಷ ಧರಿಸಿ, ಮೊಸರು ಕುಡಿಕೆ ಒಡೆದು ಸಂಭ್ರಮಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಗೋಪಾಲಕೃಷ್ಣ ಪಾಂಡುರಂಗ ದೇವರಿಗೆ ಸರ್ವಾಲಂಕಾರ ಪೂಜೆ ನಡೆದಿದ್ದು, ಬಳಿಕ ಶ್ರೀ ದೇವರಿಗೆ ಅಷ್ಟಾವಧಾನ, ಸೇವೆ ಸಹಿತ ಮಹಾಪೂಜೆ ನಡೆದಿದೆ. ಇನ್ನೂ ಕಾರ್ಯಕ್ರಮದಲ್ಲಿ ಹೊಸಬೆಟ್ಟು ಬಾಲವಿಕಾಸ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆದು ಕಾರ್ಯಕ್ರಮ ಸಂಪನ್ನಗೊಂಡಿದೆ



