ಮೂಡಬಿದಿರೆಯ ಶೋರಿನ್ ರಿಯೋ ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ , ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಎಂ.ಕೆ .ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜು ಸಹಯೋಗದೊಂದಿಗೆ, 20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಫ್ ಸಮಾಜ ಮಂದಿರದಲ್ಲಿ ನಡೆದಿದೆ.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ದೀಪ ಬೆಳಗಿಸುವ ಮೂಲಕ ಕರಾಟೆ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿ ಶುಭ ಹಾರೈಸಿದ್ರು. ಬಳಿಕ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುದರ್ಶನ್ ಎಂ. ಮಾತನಾಡಿ, ಆತ್ಮರಕ್ಷಣೆಗೋಸ್ಕರ ಯಾವುದೇ ಆಯುಧಗಳನ್ನು ಬಳಸಿಕೊಳ್ಳದ ಸಾಹಸದ ಸಮರ ಕಲೆ ಕರಾಟೆ. ಆತ್ಮರಕ್ಷಣೆಯ ಜತೆಗೆ ಮನಸಿಗೆ ಏಕಾಗ್ರತೆಯನ್ನು, ಮಾನಸಿಕವಾಗಿ ಶಾರೀರಿಕವಾಗಿ ಒಬ್ಬ ವ್ಯಕ್ತಿ ಸದೃಢವಾಗಿ ಬೆಳೆಯಲು ಕರಾಟೆ ಸಹಕಾರಿಯಾಗುತ್ತದೆ ಎಂದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಪುರಸಭಾ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್, ಮೊಹಮ್ಮದ್ ಶರೀಫ್, ರಾಜ್ಯ ಕರಾಟೆ ಶಿಕ್ಷಕರ ಸಂಘದ ಕೋಶಾಧಿಕಾರಿ ರವಿ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸತೀಶ್ ಬೆಳ್ಮಣ್, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಕುಂದಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



