ಜನ ಮನದ ನಾಡಿ ಮಿಡಿತ

Advertisement

ವಿಶ್ವ ಆತ್ಮಹತ್ಯೆ ತಡೆ ದಿನ; ಕ್ರಿಯಾಶೀಲ ಬದುಕಿನ ತಂತ್ರವೇ ಆತ್ಮಹತ್ಯೆ ತಡೆಯುವ ಮಂತ್ರ



ಮಂಗಳೂರು: ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಉದ್ದೇಶ, ಗುರಿಯನ್ನು ಈಡೇರಿಸಿಕೊಳ್ಳುವ ಧಾವಂತದಲ್ಲಿ ಕೆಲವೊಮ್ಮೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಮೂಲ್ಯ ಬದುಕನ್ನು ಕೊನೆಗೊಳಿಸುವ ಯೋಚನೆಗೆ ಒಳಗಾಗುತ್ತಾರೆ. ತನ್ನ ಕೆಲಸದಲ್ಲಿ ಆದ ಸೋಲನ್ನೆ ಜೀವನದ ಸೋಲು ಎಂಬುದಾಗಿ ಭಾವಿಸಿಕೊಂಡು ಅತಂತ್ರ ಮನಸ್ಥಿತಿಯನ್ನು ನಿರ್ಮಿಸಿಕೊಂಡು ಆತ್ಮಹತ್ಯೆಯ ಕಡೆ ಹೆಜ್ಜೆ ಹಾಕುತ್ತಿರುವುದು ಆರೋಗ್ಯ ಪೂರ್ಣ ವ್ಯಕ್ತಿತ್ವದ ಲಕ್ಷಣವಲ್ಲ. ಇದರಿಂದ ಹೊರಗೆ ಬರಬೇಕಾದರೆ ನಾವು ಸುವಿಚಾರಗಳನ್ನು ಬೆಳೆಸಿಕೊಂಡು ಸೃಜನಶೀಲ ಯೋಜನೆಗಳನ್ನು ಬದುಕಿನಲ್ಲಿ ಹಾಕಿ ಕೊಳ್ಳಬೇಕು. ಆತ್ಮಹತ್ಯೆಯೇ ಎಲ್ಲಾ ಸಮಸ್ಯೆಗಳ ಪರಿಹಾರವಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಎಂದು ಕೆನರಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಂ ಪದ್ಮನಾಭ ಪೈಗಳು ಹೇಳಿದರು.

ಕೆನರಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಮಾವೇಶಗೊಂಡ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಜಾಥವನ್ನು ಉದ್ದೇಶಿಸಿ ಮಾತನಾಡಿದರು ಕೆನರಾ ಪ್ರೌಢಶಾಲೆಗಳುಹಾಗೂ ಪದವಿ ಪೂರ್ವ, ಪದವಿ ಕಾಲೇಜುಗಳ ಆವರಣದಿಂದ ಹೊರಟ ಜಾಥವು ನಗರದ ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ , ನವ ಭಾರತ ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತ, ಮಹಾತ್ಮ ಗಾಂಧಿ ರಸ್ತೆಯಾಗಿ ಕೆನರಾ ಪದವಿಕಾಲೇಜು ಆವರಣದಲ್ಲಿ ಸಮಾವೇಶಗೊಂಡಿತು.


ಕೆನರಾ ಹೈಸ್ಕೂಲ್ ಸಿಬಿಎಸ್ ಇಲ್ಲಿಯ ಆಪ್ತ ಸಮಾಲೋಚಕಿ ಶ್ರೀಮತಿ ಮಮತಾ ಭಂಡಾರಿ ಆತ್ಮಹತ್ಯೆ ತಡೆ ದಿನದ ಮಹತ್ವದ ಕುರಿತು ಮಾತನಾಡುತ್ತಾ ಬಾಹ್ಯ ಮತ್ತು ಆಂತರಿಕ ಪ್ರಲೋಭನೆಗಳು ಆತ್ಮಹತ್ಯೆಗೆ ಮುಖ್ಯ ಕಾರಣವಾಗುತ್ತಿವೆ. ಅವುಗಳನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸಿಕೊಂಡಾಗ ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ. ಆತ್ಮಹತ್ಯೆಯನ್ನು ಹೊರ ತಾದ ಶ್ರೇಷ್ಠ ಜೀವನ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ, ಮುಖ್ಯವಾಗಿ ಯುವ ಸಮುದಾಯದಲ್ಲಿ ಅರಿವನ್ನು ಮೂಡಿಸಬೇಕಾಗಿದೆ. ಬೀದಿ ನಾಟಕಗಳು, ಜಾಗೃತಿ ಕಾರ್ಯಕ್ರಮಗಳು, ಸೃಜನಶೀಲ ಚಟುವಟಿಕೆಗಳಿಂದ ಆತ್ಮಹತ್ಯೆಯನ್ನು ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಚಿಂತಿತರಾಗಬೇಕು ಎಂದು ಹೇಳಿದರು.


ಕೆನರಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಮಾನಸಿಕ ಒತ್ತಡಗಳು, ನಿರುದ್ಯೋಗ, ವರದಕ್ಷಿಣೆ ಪ್ರಚೋದಿತ ಆತ್ಮಹತ್ಯೆ ಇವುಗಳ ಕಾರಣಗಳು ಮತ್ತು ಪರಿಹಾರ ಕ್ರಮಗಳ ಕುರಿತು ಬೀದಿ ನಾಟಕ ಪ್ರದರ್ಶನಗೊಂಡಿತು. ಮಾನಸಿಕ ಸ್ವಾಸ್ಥ್ಯವನ್ನು ಬೆಳೆಸಿಕೊಳ್ಳಲು ಪೂರಕ ವಾತಾವರಣ ರೂಪಿಸುವ ಬಗ್ಗೆ, ಒತ್ತಡಗಳು ಬಂದಾಗ ಅವುಗಳನ್ನು ನಿಭಾಯಿಸುವ, ಆತ್ಮಹತ್ಯೆಯನ್ನು ಹೊರತುಪಡಿಸಿದ ಪರಿಹಾರ ಕ್ರಮಗಳ ಬಗೆಗಿನ ಚಿಂತನೆ ಮಾಡುವ ದೃಷ್ಟಿಕೋನದ ಬಗ್ಗೆ ಬೀದಿ ನಾಟಕದ ಪಾತ್ರಗಳ ಮೂಲಕ ಅರಿವು ಮೂಡಿಸಲಾಯಿತು.


ಕೆನರಾ ಆಡಳಿತ ಮಂಡಳಿಯ ಸಹಖಜಾಂಚಿ ಶ್ರೀ ಜಗನ್ನಾಥ್ ಕಾಮತ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ಕಾಮತ್ ಹಾಗೂ ಶ್ರೀ ಗೋಪಾಲಕೃಷ್ಣ ಶೆಣೈ, ಕೆನರಾ ವಿಕಾಸ ಕಾಲೇಜಿನ ಸಂಯೋಜಕರಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಪದವಿ ಕಾಲೇಜಿನ ಮ್ಯಾನೇಜರ್ ಶ್ರೀ ಶಿವಾನಂದ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನರೇಶ್ ಶೆಣೈ, ಕೆನರಾ ಆಂಗ್ಲ ಪ್ರಾಥಮಿಕ ಶಾಲೆ ಹಾಗೂ ಕೆನರಾ ಹೈಸ್ಕೂಲ್ ಉರ್ವಾ ಇಲ್ಲಿಯ ಮ್ಯಾನೇಜರ್ ಶ್ರೀ ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಓ ಶ್ರೀಮತಿ ಉಜ್ವಲ್ ಮಲ್ಯ, ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದರು.


Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!