ರಾಜಕೀಯದಲ್ಲಿ ಧರ್ಮ ದಂಗಲ್ ತಾರಕಕ್ಕೇರಿ, ಮೌನಕ್ಕೆ ಜಾರಿದೆ. ಉದಯನಿಧಿ ಆರಂಭಿಸಿದ ಸನಾತನ ಕದನ ಹಿಡಿದೂ, ಪರಮೇಶ್ವರ್ ಎತ್ತಿದ ಹಿಂದೂ ಧರ್ಮದ ಹುಟ್ಟಿನ ಪ್ರಶ್ನೆ ವಾಗ್ಯುದ್ಧಕ್ಕೆ ಕಾರಣಕ್ಕೆ ಆಗಿತ್ತು. ಈಗ ಪರಮೇಶ್ವರ್ ದಿಢೀರ್ ವರಸೆಯನ್ನೇ ಬದಲಿಸಿದ್ದಾರೆ.

ಅವರ ನಡೆ-ನುಡಿಗಳು ಅವರ ಹಿಂಬಾಲಕರು, ಅಭಿಮಾನಿಗಳನ್ನೆ ದಿಗಿಲು ಬಡಿಸಿದೆ. ಹಿಂದೂ ಧರ್ಮದ ಬಗ್ಗೆ ಕ್ವಶ್ಚನ್ ಮಾರ್ಕ್ ಹಾಗೆಯೇ ಇದೆ. ಅಷ್ಟಕ್ಕೂ ಹಿಂದೂ ಧರ್ಮ ಯಾವಾಗ ಹುಟ್ಟಿತು? ಹಿಂದೂ ಧರ್ಮವನ್ನ ಹುಟ್ಟಿಸಿದ್ಯಾರು? ಈ ಪ್ರಶ್ನಾರ್ಥಕ ಚಿಹ್ನೆಯೇ ಬಿದ್ದಿದೆ, ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ. ಅವತ್ತು ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆ ಗುರುವಿಗೆ ಗುರುವಂದನೆ ಸಲ್ಲಿಸಬೇಕಿದ್ದ ಸಭೆಯಲ್ಲಿ ಗೃಹ ಸಚಿವ ಪರಂ ಎತ್ತಿದ ಪ್ರಶ್ನೆಗಳು. ಈ ಪ್ರಶ್ನೆಗಳೇ ಸನಾತನ ಧರ್ಮದ ಪರಂಪರೆಯನ್ನ ಅಣಕಿಸಿತ್ತು. ಅದಾದ ಬಳಿಕ ನಡೆದಿದ್ದು ಅಚ್ಚರಿ ವಿಸ್ಮಯ



