ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ಬಹಳ ನಷ್ಟ ಉಂಟಾಗಿದ್ದು, ಇದಕ್ಕೆ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಯನ್ನು ಪೂರೈಸಬೇಕೆಂದು ಒತ್ತಾಯಿಸಿ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಮುಷ್ಕರವನ್ನು ನಾಳೆ ಕೈಗೊಂಡಿದೆ.

ಇಂದು ರಾತ್ರಿಯಿಂದಲೇ ಈ ಸಾರಿಗೆ ಬಂದ್ ಆಗಲಿದ್ದು, ಕೆಲವು ಖಾಸಗಿ ಶಾಲೆಗಳಿಗೆ ಸೋಮವಾರ ಬೆಂಗಳೂರಿನಲ್ಲಿ ರಜೆ ಘೋಷಣೆ ಮಾಡಲಾಗಿದೆ. ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಬಂದ್‌ಗೆ ಶಾಲಾ ವಾಹನಗಳ ಮಾಲೀಕರು ಬೆಂಬಲ ನೀಡಿದ್ದು, ಶಾಲಾ ಮಕ್ಕಳಿಗೆ ಹೋಗಲು ತೊಂದರೆಯಾಗುವುದರಿಂದ ಬೆಂಗಳೂರಿನ ಆರ್ಕಿಡ್ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳು ನಾಳೆ ರಜೆ ಘೋಷಣೆ ಮಾಡಿದೆ.
ಸರಕು ಸಾಗಣೆ ವಾಹನ, ಶಾಲಾ ವಾಹನ, ಟ್ಯಾಕ್ಸಿ, ಖಾಸಗಿ ಬಸ್, ಓಲಾ, ಉಬರ್, ಆಟೋ ಸೋಮವಾರ ರಸ್ತೆಗಿಳಿಯುವುದಿಲ್ಲ. ಅನೇಕ ಶಾಲೆಗಳು ರಜೆ ಘೋಷಣೆ ಮಾಡಿದ್ದು, ಹಾಗೆ ಮತ್ತಷ್ಟು ಶಾಲೆಗಳು ರಜೆ ಘೋಷಣೆ ಮಾಡಲಿದೆ ಎಂದು ಒಕ್ಕೂಟದ ಪ್ರಮುಖ ಜಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನೂ ಕರ್ನಾಟಕ ಖಾಸಗಿ ಶಾಲಾ ವಾಹನಗಳ ಯೂನಿಯನ್ ವತಿಯಿಂದ ಖಾಸಗಿ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಿದೆ.



