ಯುವತಿಯೊಬ್ಬಳನ್ನು ಕದ್ರಿ ಪೊಲೀಸರು ಠಾಣೆಯಲ್ಲಿ ಹಿಡಿದಿಡಲು ಹರಸಾಹಸ ಪಟ್ಟಂತಹ ಘಟನೆಯೊಂದು ನಡೆದಿದೆ.
ಪಂಪ್ವೆಲ್‌ನಲ್ಲಿ ಮೆಡಿಕಲ್ ಒಂದಕ್ಕೆ ಬಂದಿದ್ದ ಯುವತಿಯೋರ್ವಳು ಎಲ್ಲರ ಮೇಲೆ ಆಕ್ರಮಣಕಾರಿಯಾಗಿ ವರ್ತನೇ ಮಾಡುತ್ತಿದ್ದು, ಇದನ್ನು ಕಂಡ ರೌಂಡ್ಸ್ ಅಬಕಾರಿ ಇಲಾಖೆಯವರು ಆಕೆಯನ್ನು ಹಿಡಿದು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಕೆ ಪೊಲೀಸರ ಮೇಲೆ ದಾಳಿ ಮಾಡಿದ್ದು, ಬೇರೆ ವಿಧಿಯಿಲ್ಲಿ ಯುವತಿಯನ್ನು ಕದ್ರಿ ಠಾಣೆಗೆ ತಂದಿದ್ದಾರೆ.
ಯುವತಿ ಅಲ್ಲಿ ಕೂಡಾ ಮಹಿಳಾ ಪೊಲೀಸರಿಗೆ ತನ್ನ ಕಾಲಿನಿಂದ ಒದ್ದಿದ್ದಾಳೆ. ನಂತರ ಯುವತಿಯ ಕೈಗೆ ಕೋಳ ತೊಡಿಸಿ ಕೈ ಕಾಲು ಕಟ್ಟಿ ಆಸ್ಪತ್ರೆಗೆ ಒಯ್ದಿದ್ದು ತಪಾಸಣೆ ಮಾಡಲಾಗಿದೆ.
ಡ್ರಗ್ಸ್ ಏನಾದರೂ ತಗೊಂಡು ಈ ರೀತಿ ವರ್ತನೆ ಮಾಡುತ್ತಿದ್ದಾಳೆಯೇ ಎಂದು ಚೆಕ್ ಮಾಡಿದಾಗ, ಇದೆಲ್ಲ ನೆಗೆಟಿವ್ ಬಂದಿದೆ. ನಂತರ ಆಕೆಯ ಪೋಷಕರ ಬಗ್ಗೆ ಕೇಳಿದಾಗ ಏನೂ ಮಾಹಿತಿ ನೀಡುತ್ತಿರಲಿಲ್ಲ. ಒಮ್ಮೆ ಹಿಂದಿ, ಇಂಗ್ಲೀಷ್ ಮಾತನಾಡುವ ಈಕೆಯನ್ನು ಕೊನೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ನನ್ನ ಮನೆ ಇಲ್ಲಿದೆ ಎಂದಿದ್ದಾಳೆ. ಕೊನೆಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಾ ಇದೆ.
ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅಂಬಲಪಾಡಿ ಸಮೀಪದ ಬಿಆರ್ ಮೆಡೋಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮೃತರನ್ನು ಉಡುಪಿಯ…
ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಕರ್ನಾಟಕದ ಮೊದಲ ಶಾಖೆ ಆಗಸ್ಟ್ 13ರಂದು ಮಂಗಳೂರಿನಲ್ಲಿ ಕಾರ್ಯಾರಂಭಗೊಳ್ಳಲಿದೆ.…
ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದ ವತಿಯಿಂದ ನಿವೃತ್ತ ವೀರ ಯೋಧರು ಹಾಗೂ ವೀರನಾರಿಯರನ್ನು ಗೌರವಿಸುವ ವಿಶೇಷ…
ಡಿಸಿ ಮನ್ನಾ ಭೂಮಿಯನ್ನು ಅರ್ಹ ಬಡ ಹಾಗೂ ಶೋಷಿತ ಕುಟುಂಬಗಳಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ,…
ಕಸಬಾ ಗ್ರಾಮದ ಕುರುಂಬಳ ನಿವಾಸಿ ಹಮೀದ್ ಅವರ ಮನೆಯಲ್ಲಿ ಭಾನುವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು ಮನೆ ಸಂಪೂರ್ಣ…
ತೊಕ್ಕೊಟ್ಟು ವಿನಮ್ರ ಬಾರ್ ಬಳಿ ತಲವಾರು ಬೀಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಆರೋಪದ ಮೇಲೆ ರೌಡಿಶೀಟರ್‌ವೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.…