ಮುಲ್ಕಿ: ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಸಂಘದ ಶ್ರೀ ನಾರಾಯಣ ಸನಿಲ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಸತೀಶ್ ಭಟ್ ಮಾತನಾಡಿ ಸಂಘದ ಅಭಿವೃದ್ಧಿಗೆ ಗ್ರಾಹಕರು ಹಾಗೂ ನಿರ್ದೇಶಕರ ಶ್ರಮ ಕಾರಣವಾಗಿದ್ದು ಈ ಬಾರಿ ಶೇಕಡ 18 ಡಿವಿಡೆಂಟ್ ನೀಡಲಾಗಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ನಿರ್ದೇಶಕರಾದ ವಿನೋದ್ ಕುಮಾರ್ ಬೊಳ್ಳೂರು, ಗೀತಾ ಆರ್ ಶೆಟ್ಟಿ, ಯೋಗೀಶ್ ಪಾವಂಜೆ, ವಸಂತ್ ಬೆರ್ನಾಡ್, ಮೀರಾಬಾಯಿ ಕೆ, ರೋಹಿಣಿ ಬಿ ಶೆಟ್ಟಿ, ಅಶೋಕ್ ಬಂಗೇರ, ಮಹೇಶ್ ಸುವರ್ಣ, ದಿವ್ಯಾ, ಶಂಕರ, ನಾಮನಿರ್ದೇಶಕ ಸದಸ್ಯ ರಾಜೇಶ್ ಎಸ್ ದಾಸ್, ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಕಿರಣ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕರ್ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ 2022-23ನೇ ಸಾಲಿನ ಆಡಳಿತ ಮಂಡಳಿ ವರದಿ ಹಾಗೂ ಬಜೆಟ್ ನ್ನು ಪರಿಶೀಲಿಸಿ ಮಂಜೂರು ಮಾಡಲಾಯಿತು.



