ಮುಸ್ಲಿಮರು “ಭಯೋತ್ಪಾದಕ ಕೃತ್ಯಗಳನ್ನು” ಎಸಗುತ್ತಿದ್ದಾರೆ ಹಾಗೂ ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ ಎಂಬ ಯೋಗ ಗುರುಗಳಾದ ಬಾಬಾ ರಾಮ್ ದೇವ್ ಅವರ ಭಾಷಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗಾಗಿ ಗುರುಗಳು ಅಕ್ಟೋಬರ್ 5ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ರಾಜಸ್ಥಾನ ಹೈಕೋರ್ಟ್ ಸೂಚನೆ ನೀಡಿದೆ.

ವಿಚಾರಣೆಗಾಗಿ ತನಿಖಾಧಿಕಾರಿಗಳು ಕರೆದಾಗಲೆಲ್ಲ ಬಾಬಾ ರಾಮ್ ದೇವ್ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಕುಲದೀಪ್ ಮಾಥುರ್ ನೇತೃತ್ವದ ನ್ಯಾಯಪೀಠ ಸೂಚನೆ ನೀಡಿದ್ದು, ಜೊತೆಗೆ ಅವರ ಬಂಧನಕ್ಕೆ ಏಪ್ರಿಲ್ 13ರಂದು ವಿಧಿಸಿದ್ದ ತಡೆಯಾಜ್ಞೆಯನ್ನು ಅಕ್ಟೋಬರ್ 16ರವರೆಗೆ ವಿಸ್ತರಿಸಿದೆ.
ಇನ್ನೂ ಮುಂದಿನ ವಿಚಾರಣೆ ನಡೆಯುವ ಅಕ್ಟೋಬರ್ 16ರಂದು ಕೇಸ್ ಡೈರಿಯನ್ನು ನ್ಯಾಯಾಲಯಕ್ಕೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ಸರ್ಕಾರಿ ಅಭಿಯೋಜಕರಿಗೆ ರಾಜಸ್ಥಾನ ಹೈಕೋರ್ಟ್ ಸೂಚನೆ ನೀಡಿದೆ.
ಇನ್ನೂ ಮುಸ್ಲಿಮರು “ಭಯೋತ್ಪಾದಕ ಕೃತ್ಯಗಳನ್ನು” ಎಸಗುತ್ತಿದ್ದಾರೆ ಹಾಗೂ ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ ಎಂದು ಭಾಷಣ ಮಾಡಿರುವ. ರಾಮ್ ದೇವ್ ರವರ ಅವರ ವಿರುದ್ದ ಬರ್ನೇರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.



