ಖಾಸಗಿ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಂದಿಕೂರು ಮುದರಂಗಡಿ ಜಂಕ್ಷನ್ ಬಳಿ ಸೆ.13ರಂದು ನಡೆದಿದೆ.
ಪಡುಬಿದ್ರಿ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಂದಿಕೂರು ಮುದರಂಗಡಿ ಜಂಕ್ಷನ್ ಬಳಿ ಸೆ.13ರಂದು ನಡೆದಿದೆ.
ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಬೊಂಡುಕುಮೇರಿ ನಿವಾಸಿ ಬೈಕ್ ಸವಾರ ಅಶ್ವಿತ್ ಶೆಟ್ಟಿ (23) ಮೃತಪಟ್ಟ ವ್ಯಕ್ತಿ.


ಅಶ್ವಿತ್ ಶೆಟ್ಟಿ ತನ್ನ ಹೊಸ ಬೈಕಿನ ಸರ್ವೀಸ್ ಮಾಡಿಸಲು ಎಂದು ಮಂಗಳೂರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಶ್ವತ್ ತನ್ನ ಬೈಕಿನಲ್ಲಿ ಪಡುಬಿದ್ರೆ ಮಾರ್ಗವಾಗಿ ನಂದಿಕೂರು ಎಂಬಲ್ಲಿ ಹೋಗುತ್ತಿದ್ದಾಗ ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ ಡಿಕ್ಕಿಯಾಗಿದೆ.
ಈ ಭೀಕರ ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ಅಶ್ವಥ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಶ್ವಿತ್ ಶೆಟ್ಟಿ ಅವರು ಯೂಟ್ಯೂಬರ್ ಆಗಿದ್ದು, ಇತ್ತೀಚೆಗೆ ಬೈಕ್ ನಲ್ಲಿ ಲಡಾಖ್ ಹೋಗಿ ಬಂದಿದ್ದರು. ಅಪಘಾತದ ರಭಸಕ್ಕೆ ಅಶ್ವಿತ್ ಅವರ ದೇಹವು ಬಸ್ ಮೈನ್ ಆಕ್ಸಿಲ್ ನಲ್ಲಿ ಸಿಲುಕಿಕೊಂಡಿದ್ದು, ಬಸ್ ನ ಹಿಂದಕ್ಕೆ ಚಲಾಯಿಸಿ ಅಶ್ವಿತ್ ದೇಹವನ್ನು ಹೊರತೆಗೆಲಾಗಿತ್ತು.
ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



