ಹಿರಿಯ ಹಾಸ್ಯ ನಟ ಸತಿಂದರ್ ಕುಮಾರ್ ಖೋಸ್ಲಾ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಭಾರತೀಯ ಚಿತ್ರರಂಗದ ದಿಗ್ಗಜ ಸತೀಂದ್ರ ಕುಮಾರ್ ಖೋಸ್ಲಾ ನಿಧನಕ್ಕೆ ಬಾಲಿವುಡ್ ಮಂದಿ ಮಿಡಿಯುತ್ತಿದ್ದಾರೆ. ಸತೀಂದರ್ ಕುಮಾರ್ ಖೋಸ್ಲಾ ಅವರು 1938ರಲ್ಲಿ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಜನಿಸಿದ್ದು, 1967 ರಲ್ಲಿ ಉಪ್ಕಾರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿ ಹಿಂದಿ ಚಿತ್ರರಂಗದ ಜೊತೆಗೆ ಪಂಜಾಬಿ, ಭೋಜ್‌ಪುರಿ ಮತ್ತು ಮರಾಠಿ ಸಿನಿಮಾ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಖೋಸ್ಲಾ ಅವರ ಹಿಟ್ ಸಿನಿಮಾಗಳು: ಖೋಸ್ಲಾ ಅವರು ದೋ ಬದನ್ (1966), ಬೂಂದ್ ಜೋ ಬಾನ್ ಗೈ ಮೋತಿ (1967) ನಟಿಸಿದರು. ಬಳಿಕ ನಟ ಮನೋಜ್ ಕುಮಾರ್ ಅವರ ಸಲಹೆಯಂತೆ ತಮ್ಮ ಹೆಸರನ್ನು ಬೀರ್ಬಲ್ ಎಂದು ಬದಲಾಯಿಸಿಕೊಂಡರು. ಮನೋಜ್ ಕುಮಾರ್ ಅವರ ರೋಟಿ ಕಪ್ಡಾ ಔರ್ ಮಕನ್ (1974) ಮತ್ತು ಕ್ರಾಂತಿ (1981) ಚಿತ್ರಗಳಲ್ಲಿನ ಅವರ ಪಾತ್ರಗಳು ಗಮನ ಸೆಳೆದಿವೆ. ಶೋಲೆ (1975), ಸೊರಜ್ (1977) ಚಿತ್ರಗಳಲ್ಲಿ ಅವರು ಅರ್ಧ ಮೀಸೆಯ ಕೈದಿಯಾಗಿ ನಟನೆ, ದೇವ್ ಆನಂದ್ ಅವರ ಅಮೀರ್ ಗರೀಬ್ (1974) ನಲ್ಲಿ ನಕ್ಕು ನಲಿಸಿದ್ದರು.



