ಮೂಡುಬಿದಿರೆಯ ಸಮಾಜ ಮಂದಿರದಲ್ಲಿದ ಶೋರಿನ್ ರೀಯೂ ಕರಾಟೆ ಅಸೋಸಿಯೇಷನ್, ಸ್ವಾಮಿ ಸ್ತ್ರಂತ್ ಟ್ರೈನಿಂಗ್ ಸೆಂಟರ್ ಹಾಗೂ ಎಂ. ಕೆ ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜ್ಯುಕೇಷನ್ ಆಯೋಜಿಸಿದ 20 ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಕೆಲ್ ರಾಯ್, ಮಂಗಳೂರಿನ ರೆಡ್ ಕ್ಯಾಮಲ್ ಆಂಗ್ಲ ಮಾಧ್ಯಮ ಶಾಲೆ ಟೀಮ್ ಚಾಂಪಿಯನ್, ಬರಕ್ಕ ಇಂಟರ್ನ್ಯಾಷನಲ್ ಸ್ಕೂಲ್ ಮಂಗಳೂರು ರನ್ನರ್ ಹಾಗೂ ಶಫರ್ಡ್ ಇಂಟರ್ನ್ಯಾಷನಲ್ ಅಕಾಡೆಮಿ , ಮಂಗಳೂರು 2nd ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಈ ಪಂದ್ಯಾವಳಿಯಲ್ಲಿ ರಾಜ್ಯದ ಸುಮಾರು 100 ಶಾಲೆಗೆ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಎಂ ಕೆ ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜ್ಯುಕೇಷನ್ ನ ಪ್ರಾಂಶುಪಾಲ ಧನಂಜಯ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅತಿಥಿಯಾಗಿ ಮೂಡುಬಿದಿರೆ ಪ್ರೆಸ್ ಕ್ಲಬ್ ನ ಉಪಾಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಶೋರಿನ್ ರಿಯೂ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ಮೊಹಮ್ಮದ್ ನದೀಮ್, ಸಂಘಟಕ ರಾಜೇಶ್, ಸ್ವಾಮಿ ಪ್ರಸಾದ್ , ಸತೀಶ್ ಬೆಳ್ಮಣ್, ರವಿ ಸಾಲಿಯಾನ್, ಸಫ್ರಾಝ್, ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.



