ಸೆ. 19 ರಂದು ನಡೆಯಲಿರುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಶಾಂತಿಯುತವಾಗಿ ಆಚರಿಸುವ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎಸ್.ಐ.ಹರೀಶ್ ನೇತೃತ್ವದಲ್ಲಿ ಸಮಾಜದ ಪ್ರಮುಖರ ಸಭೆ ನಡೆದಿದೆ. ಸಭೆಯಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಪಾಲಿಸಬೇಕಾದ ಸರಕಾರದ ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ತಾಲೂಕಿನಲ್ಲಿ ನಡೆಯುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವುದು ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಸಿದ್ದವಿದೆ. ಅಂತಹ ಸಂಗತಿಗಳು ಕಂಡುಬಂದರೆ ಪೋಲೀಸ್ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿದರು.

ಗಣೇಶನ ಹಬ್ಬದ ವಿವಿಧ ಕಾರ್ಯಗಳು ಶಾಂತಿಯುತವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ರಾತ್ರಿ 10 ಗಂಟೆಯ ಒಳಗೆ ಪ್ರತಿ ದಿನದ ಕಾರ್ಯಕ್ರಮ ಮುಗಿಸಬೇಕು. ಗಣೇಶನ ವಿಗ್ರಹವನ್ನು ಇಡುವ ಚೌಕಿ ಅಥವಾ ಸಭಾ ವೇದಿಕೆಯಲ್ಲಿ ರಾತ್ರಿ ಪಾಳಿಯಲ್ಲಿ ಸ್ವಯಂ ಸೇವಕರು ಕಾಯಬೇಕು.

ಗಣೇಶ ಹಬ್ವಕ್ಕೆ ಶುಭಕೋರುವ ಬ್ಯಾನರ್ ಗಳನ್ನು ಹಾಕಿದರೆ ಎಲ್ಲೂ ಕೂಡ ಯಾವುದೇ ವಿವಾದವಾಗದಂತೆ ಜವಾಬ್ದಾರಿ ವಹಿಸಬೇಕು.
ಪಂಚಾಯತ್ ನಿಂದ, ಮೆಸ್ಕಾಂ, ಅಗ್ನಿಶಾಮಕ ದಳದ ಅನುಮತಿಯನ್ನು ಪಡೆದುಕೊಳ್ಳಿ, ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ತಾತ್ಕಾಲಿಕ ಸಿಸಿ.ಟಿ.ವಿ ಅಳವಡಿಸಿ, ಮೆರವಣಿಗೆ ವೇಳೆ ಡಿ.ಜೆ.ಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಎಸ್.ಐ.ಮೂರ್ತಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.



