ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಸಭೆ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆದಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಪದ್ಮಿನಿ ವಿಜಯಕುಮಾರ್ ಶೆಟ್ಟಿ ವಹಿಸಿದ್ರು. ಬಳಿಕ ಅವರು ಮಾತನಾಡಿ ಕೃಷಿ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಸಂಘದ ಯಶಸ್ವಿಗೆ ಸದಸ್ಯರು ಕಾರಣಕರ್ತರಾಗಿದ್ದು, ಈ ಬಾರಿ ಸಂಘದ ಸದಸ್ಯರಿಗೆ ಲಾಭದ ಅಂಶದಲ್ಲಿ ಶೇ.21 ಡಿವಿಡೆಂಡ್ ನೀಡಲಾಗಿದೆ ಎಂದರು.
ಬಳಿಕ ದ.ಕ. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್ ಮಾತನಾಡಿ, ಕೃಷಿ ಹಾಗೂ ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದರ ಮುಖಾಂತರ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಬೇಕಾಗಿದೆ ಎಂದರು. ಈ ವೇಳೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಶೆಟ್ಟಿ ಲೆಕ್ಕಪತ್ರ ಮಂಡಿಸಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಡೈರಿಗೆ ಅತಿ ಹೆಚ್ಚು ಹಾಲು ಹಾಕಿದ ಹರಿಣಾಕ್ಷಿ (ಪ್ರ), ವಿಜಯ ಆರ್ ಶೆಟ್ಟಿ (ದ್ವಿ), ಪದ್ಮಿನಿ ವಿ. ಶೆಟ್ಟಿ(ತೃ), ಪ್ರಪುಲ್ಲಾ ಸಿ ಶೆಟ್ಟಿ (ಅತಿ ಹೆಚ್ಚು ಫ್ಯಾಟ್) ರವರಿಗೆ ಬಹುಮಾನ ನೀಡಲಾಯಿತು. ಬಳಿಕ ಕಳೆದ ಸಾಲಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪೂರ್ವಿಕ ಎಚ್ ಶೆಟ್ಟಿ, ಹರ್ಷಿತಾ ಆರ್ ಶೆಟ್ಟಿ, ಉಮಾವತಿ ಯು. ಕೋಟ್ಯಾನ್ ರವರನ್ನು ಗೌರವಿಸಲಾಗಿದೆ.



