ಜೆಡಿಎಸ್-ಬಿಜೆಪಿ ಮೈತ್ರಿ ಟಿಕೆಟ್ ಹಂಚಿಕೆ ಸದ್ಯ ಪ್ರಾಥಮಿಕ ಹಂತದಲ್ಲಿದೆ ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇವರು ಮಂಗಳೂರಿನಲ್ಲಿ ಮಾತಾನಾಡಿ, ಮೈತ್ರಿ ಬಗ್ಗೆ ವರಿಷ್ಠರು ಚರ್ಚಿಸಿ, ನಮ್ಮನ್ನ ಮಾತನಾಡಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಂದಾಗಿ ಹೆಚ್ಚು ಸೀಟ್ ಪಡೆಯೋದು ಅವರ ಉದ್ದೇಶವಾಗಿದೆ ಎಂದ್ರು. ಇನ್ನೂ ಇದೇ ವೇಳೆ ಬರಗಾಲದ ಬಗ್ಗೆ ಮಾತಾನಾಡಿ, ರಾಜ್ಯಸರಕಾರ ಮಾನ್ಸೂನ್ ಪೂರ್ವದ ಮಳೆ ವಿಫಲವಾದಾಗ ಎಚ್ಚೆತ್ತುಕೊಳ್ಳಬೇಕಿತ್ತು. ಆದ್ರೆ ಅವರು ಬರಗಾಲ ಘೋಷಣೆ ವಿಳಂಬ ಮಾಡಿದ್ದಾರೆ. ಇದಕ್ಕೆ ಕಾರಣ ಸರಕಾರ ವರದಿ ಪಡೆಯದೇ ಇರುವುದು. ಈಗ ಮುಂಗಾರು ಹೋಗಿದ್ದು, ರೈತರಿಗೆ ಸಹಾಯ ಮಾಡಲು ಸಾಧ್ಯವಿಲ್ಲ, ಕನಿಷ್ಠ ಬೆಳೆ ನಷ್ಟ ಪರಿಹಾರವಾದ್ರೂ ರಾಜ್ಯ ಸರಕಾರ ನೀಡಬೇಕು ಎಂದು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



