ದಕ್ಷಿಣ ಕನ್ನಡ : ಕರಾವಳಿ ಕರ್ನಾಟಕದ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳ ಈಗ ಇನ್ನಷ್ಟು ವಿಸ್ತಾರಗೊಳ್ಳುವ ಲಕ್ಷಣ ಗೋಚರಿಸುತ್ತಿದೆ,
ಕಂಬಳವನ್ನು ಈ ಬಾರಿ ರಾಜ್ಯ ರಾಜಧಾನಿಯಲ್ಲಿ ನಡೆಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ “ಬೆಂಗಳೂರು ಕಂಬಳ,ನಮ್ಮ ಕಂಬಳ” ಧ್ಯೇಯ ವಾಕ್ಯದೊಂದಿಗೆ ನವೆಂಬರ್‌ನಲ್ಲಿ ಕಂಬಳ ನಡೆಸಲಾಗುವುದು ಎಂದು ಪುತ್ತೂರು ಶಾಸಕ ಮತ್ತು ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಈಗಾಗಲೇ ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಡೆಯಲಿರುವ ಕಂಬಳಗಳ ಬಗ್ಗೆ ದಿನಾಂಕ ಪ್ರಕಟಿಸುವ ನಿರೀಕ್ಷೆಯಲ್ಲಿದ್ದು ಹೊಸ ಅಧ್ಯಕ್ಷರ ಆಯ್ಕೆ ಆಗಿದೆ ಎಂಬ ಮಾಹಿತಿ ದೊರೆತಿದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳಗಳಿಗೆ ಸರಕಾರ ಐದು ಲಕ್ಷ ಅನುದಾನ ಒದಗಿಸಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ.

ಬೆಂಗಳೂರು ಕಂಬಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕಂಬಳ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು , ಆನ್ಲೈನ್ ಮೂಲಕ ಪಾಸ್ ನೀಡಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ . ಕೆಲವು ಶಾಸಕರು, ಸಚಿವರು ಪೂರಕವಾದ ಪ್ರಾಯೋಜಕತ್ವ ವ್ಯವಸ್ಥೆ ಮಾಡುವುದಾಗಿಯೂ, 20 ಸಾವಿರಕ್ಕೂ ಅಧಿಕ ಮಂದಿ ಸ್ವಯಂಸೇವಕರು ಸಮವಸ್ತ್ರದಲ್ಲಿರುವುದಾಗಿಯೂ, ಕಂಬಳ ಕೋಣಗಳನ್ನು ಬಾಡಿಗೆ ಲಾರಿ ಮೂಲಕ, ಅಥವಾ ರೈಲು ಮಾರ್ಗದ ಮೂಲಕ ಕರೆತರುವುದಾಗಿಯೂ, ಹಾಗೂ ಕಂಬಳ ಯುಜಮಾನರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ತೀರ್ಮಾನಿಸುವುದಾಗಿ ಮಾಹಿತಿಯನ್ನು ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇರುವ ಜಯಚಾಮರಾಜೇಂದ್ರ ಕೆರೆಯಲ್ಲಿ “ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ” ಎಂಬ ಹೆಸರಿನಲ್ಲಿ ಕರಾವಳಿ ಕರ್ನಾಟಕದ ಜನಪ್ರಿಯ ಕ್ರೀಡೆ ಕಂಬಳ ವಿಜೃಂಭಣೆಯಿಂದ ಇದೇ ಮೊದಲ ಬಾರಿ ಬೆಂಗಳೂರಲ್ಲಿ ನಡೆಯಲಿದೆ. ಕರ್ನಾಟಕದ ಕಂಬಳ ಪ್ರೇಮಿಗಳಿಗೆ ಕಂಬಳ ವೀಕ್ಷಿಸಲು ಸುವರ್ಣ ಆಕಾಶ ಒದಗಿಬಂದಿದೆ



