ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಬರುತ್ತಿದ್ದ ಗಣೇಶ ಮೂರ್ತಿ ಪಲ್ಟಿಯಾದ ಘಟನೆ ತೆಲಂಗಾಣದ ನಂದಿನಿ ಗ್ರಾಮದ ಬಳಿ ನಡೆದಿದೆ.

ಹೈದರಾಬಾದ್ ನಿಂದ ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿಗೆ ಹಾನಿಯಾಗಿದೆ.
ಟಿಪ್ಪರ್ ನಲ್ಲಿ ಬೃಹದಾಕಾರದ ಗಣೇಶ ಮೂರ್ತಿ ತರುವ ವೇಳೆ ಈ ದುರ್ಘಟನೆ ಸಂಭವಿಸಿದ್ದು, ರಸ್ತೆಯಲ್ಲಿ ಇದ್ದ ವೈರ್ ಗಣೇಶ ಮೂರ್ತಿಗೆ ತಾಗಿ ಅನಾಹುತ ನಡೆದಿದೆ.

ವೈರ್ ಸರಿಪಡಿಸುವ ವೇಳೆ ಗಣೇಶನ ಮೂರ್ತಿ ನೆಲಕ್ಕೆ ಉರುಳಿದೆ. ಬೃಹತ್ ಗಣೇಶನ ಮೂರ್ತಿ ಲಕ್ಷಾಂತರ ರೂ. ಮೌಲ್ಯದ್ದಾಗಿದ್ದು, ಪ್ರತಿಷ್ಠಾಪನೆ ಮುನ್ನವೇ ಅದಕ್ಕೆ ಹಾನಿಯಾಗಿದೆ. ಇಷ್ಟೆಲ್ಲಾ ಮಾಡಿ ಜಾಗರೂಕತೆಯಿಂದ ಕರೆ ತಂದರು ಎಡವಟ್ಟಾಗಿರುವುದರಿಂದ ಭಕ್ತಗಣ ಬೇಸರ ವ್ಯಕ್ತಪಡಿಸಿದ್ದಾರೆ.



