ಜನ ಮನದ ನಾಡಿ ಮಿಡಿತ

Advertisement

“ಶಾಸಕರ ನೂತನ ಕಚೇರಿಗೆ ಪುತ್ತೂರು ನಗರಸಭಾ ನಿಧಿಯ ದುರುಪಯೋಗವಾಗಿದೆ” ನಗರಸಭೆ ಬಿಜೆಪಿ ಸದಸ್ಯರಿಂದ ಆಕ್ಷೇಪಿಸಿ, ಡಿ.ಸಿಗೆ ಮನವಿ

ಪುತ್ತೂರು: ಶಾಸಕರ ನೂತನ ಕಚೇರಿಗೆ ಪುತ್ತೂರು ನಗರಸಭಾ ನಿಧಿಯ ದುರುಪಯೋಗವಾಗಿದೆ ಮತ್ತು ನಗರಸಭೆಯ ನಗರೋತ್ಥಾನದ ವಿವಿಧ ಕಾಮಗಾರಿ ವಿಳಂಬ ಸಹಿತ ನಗರಸಭೆ 2 ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಇನ್ನೂ ಆಗಿಲ್ಲ ಎಂದು ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಪುತ್ತೂರಿನಲ್ಲಿ ಮನವಿ ಮಾಡಿದ್ದಾರೆ.


ಪುತ್ತೂರು ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿಯವರು ಸೆ.15 ರಂದು ಆಗಮಿಸಿದ ವೇಳೆ ಸದಸ್ಯರು ಮನವಿ ಮಾಡಿದ್ದಾರೆ.

ಪುತ್ತೂರು ಶಾಸಕರು ನಮ್ಮ ನಗರ ಸಭೆಯ ಕಟ್ಟಡದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಗರ ಯೋಜನಾ ಪ್ರಾಧಿಕಾರದ ಕಚೇರಿಯನ್ನು ಅಲ್ಲಿಂದ ತೆರವುಗೊಳಿಸಿ ತಮ್ಮ ಶಾಸಕರ ಕೊಠಡಿಯನ್ನಾಗಿ ತಮ್ಮ ಮೂಲಕ ಪರಿವರ್ತಿಸಿರುತ್ತಾರೆ, ಅಲ್ಲದೆ ಸದ್ರಿ ಕಚೇರಿಯ ನವೀಕರಣಕ್ಕೆ, ಸುಮಾರು 31 ಲಕ್ಷ ರೂಪಾಯಿಗಳನ್ನು ಸಾರ್ವಜನಿಕರ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ನೀಡುವಂತೆ ತಮ್ಮ ಮೂಲಕ ಆದೇಶ ನೀಡಲಾಗಿದೆ.

ಈ ರೀತಿ ನಾಗರಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ಶಾಸಕರ ಐಷಾರಾಮಿ ಕಚೇರಿಯ ಅಭಿವೃದ್ಧಿಗೆ ನೀಡಲು ಚುನಾಯಿತ ಸದಸ್ಯರುಗಳಾದ ನಮ್ಮ ಆಕ್ಷೇಪವಿರುತ್ತದೆ. ಅದಲ್ಲದೇ ಈ ಹಿಂದಿನ ಅವಧಿಯಲ್ಲಿ ಮಂಜೂರಾದ ಅಮೃತ ನಗರೋತ್ಥಾನದ ಕಾಮಗಾರಿಗಳು ಆರಂಭವಾಗಿರುವುದಿಲ್ಲ.

ನಗರಸಭೆಯ ಎರಡನೆಯ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ತೊಡಕು ಇನ್ನೂ ನಿವಾರಣೆಯಾಗಿರುವುದಿಲ್ಲ. ಆದ್ದರಿಂದ ತಾವು ಈ ಎಲ್ಲಾ ವಿಚಾರಗಳ ಬಗ್ಗೆ ವರಿಶೀಲಿಸಿ ಚುನಾಯಿತ ಸದಸ್ಯರಾದ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ ಜಿ ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ಮನೋಹರ್ ಕಲ್ಲಾರೆ, ನವೀನ್ ಪೆರಿತ್ತೋಡಿ, ಪ್ರೇಮ್, ಸಂತೋಷ್ ಬೊಳುವಾರು, ಸುಂದರ ಪೂಜಾರಿ ಬಡಾವು, ಶೀನಪ್ಪ ನಾಯ್ಕ್, ಪದ್ಮನಾಭ ಪಡೀಲ್ , ವಸಂತ ಕಾರೆಕ್ಕಾಡು, ಬಾಲಚಂದ್ರ, ಶಶಿಕಲಾ ಸಿ.ಎಸ್, ಪ್ರೇಮಲತಾ ನಂದಿಲ, ಮೋಹಿನಿ ವಿಶ್ವನಾಥ್, ಮಮತಾ ರಂಜನ್, ಯಶೋದಾ ಹರೀಶ್, ಗೌರಿ ಬನ್ನೂರು, ಲೀಲಾವತಿ, ದೀಕ್ಷಾ ಪೈ, ಇಂದಿರಾ, ರೋಹಿಣಿ ಈ ಸಂದರ್ಭ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!