ಮಂಗಳೂರು; ಈಗಾಗಲೇ ಕ್ಯೂ ಆರ್ ಸ್ಕ್ಯಾನ್ ದೇಶದಾದ್ಯಂತ ಭಾರೀ ಪ್ರಚಲಿತದಲ್ಲಿದ್ದು, ಯುವ ಪಿಳಿಗೆಗಳು ಹೆಚ್ಚಾಗಿ ಕ್ಯೂಆರ್ ಸ್ಕ್ಯಾನ್ ನನ್ನೆ ಬಳಸುತ್ತಿದ್ದಾರೆ. ಡಿಜಿಟಲಿಕರಣಕ್ಕೆ ಮತ್ತಷ್ಟು ಪುಷ್ಠಿ ನೀಡಲು ʼಡ್ಯಾಡಿಸ್ ರೋಡ್ ʼ ಸಂಸ್ಥೆಯು ಮಹತ್ವದ ಯೋಜನೆಯನ್ನು ಜನರಿಗೆ ಪರಿಚರಿಸಿದೆ.

ಎಮ್ ಸ್ಕ್ಯಾರ್ ಎಂಟರ್ ಪ್ರೈಸಸ್ ನೂತನವಾಗಿ ʼಡ್ಯಾಡಿಸ್ ರೋಡ್ ʼ ಕ್ಯೂ ಆರ್ ಕೋಡ್ ನ್ನು ನಾರಾಯಣ ದಂಪತಿಗಳು ಲೋಕಾರ್ಪಣೆಗೊಳಿಸಿದ್ದಾರೆ. ಮಂಗಳೂರಿನ ಕೆ.ಎಸ್.ಆರ್ ರೋಡ್ ನಲ್ಲಿರುವ ಉತ್ಸವ ಹೋಟೇಲ್ ನಲ್ಲಿ ಕಾರ್ಯಕ್ರಮ ನಡೆದಿದ್ದು, ಬಳಿಕ
ಕರ್ನಾಟಕ ಸೂಪರ್ ಕೆಸ್ಟ್ ನ ಜಸ್ಟಿನ್ ಅವರು ಮಾತಾನಾಡಿ, ಎಲ್ಲಾ ಜನರಿಗೂ ಈ ಪ್ರೊಡೆಕ್ಟ್ ಬಹಳ ಉಪಯುಕ್ತವಾಗಿರುತ್ತದೆ ಎಂಬುವುದು ನಮಗೆ ಮೊದಲೇ ತಿಳಿದಿದೆ. ಆದ್ರೆ ಇದನ್ನ ಜನರ ಮುಂದೆ ಯಾವ ರೀತಿಯಾಗಿ ತೆಗೆದುಕೊಂಡು ಹೋಗುವುದು ಎಂಬುವುದು ನಮ್ಮ ಪ್ರಶ್ನೆಯಾಗಿತ್ತು. ಅದರೆ ಇದೀಗ ಈ ಸಂಸ್ಥೆ 26 ರಾಜ್ಯಗಳಲ್ಲಿ ಕಾರ್ಯಚರಿಸುತ್ತಿದ್ದು, 273 ಡಿಸ್ತ್ರಿಬ್ಯುಟರ್ ಗಳನ್ನು ಹೊಂದಿದೆ. ಇದರಿಂದ ವಾಹನ ಸವಾರರಿಗೆ ಹಲವು ಪ್ರಯೋಜನಗಳಿವೆ. ಹೌದು, ಒಂದು ವೇಳೆ ಅನಿವಾರ್ಯತೆ ಕಾರಣಗಳಿಂದ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ರೂ, ವಾಹನಗಳ ಮಾಲಕರನ್ನ ಕ್ಯೂ ಆರ್ ಕೋಡ್ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅಪಘಾತದಂತಹ ದುಸ್ಥಿತಿಯಲ್ಲಿಯೂ ಈ ಕ್ಯೂಆರ್ ಬಹಳ ಪ್ರಯೋಜಕಾರಿ ಎಂಬ ಮಾಹಿತಿಯನ್ನು ನೀಡಿದ್ರು. ಇನ್ನೂ ಈ ಸಂದರ್ಭದಲ್ಲಿ ಸಂಸ್ಥೆಯ ಹೆಡ್ ಮಣಿ, ಡಾ. ಗಣೇಶ್ ಕುಮಾರ್, ಮಂಗಳೂರಿನ ಉದ್ಯಮಿ ಅಬ್ದುಲ್ ಬಶೀರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.



