ನಾಗರಹಾವಿಗೆ ಡೀಸೆಲ್ ಎರಚಿದಾತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.

ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರ ಹಾವೊಂದು ಕಂಡುಬಂದಿದ್ದು, ಇದನ್ನು ಕಂಡ ಕಟ್ಟಡದ ಕಾವಲುಗಾರ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ನಾಗರ ಹಾವಿಗೆ ಡೀಸೆಲ್ ಎರಚಿದ್ದಾನೆ.ಉರಿಯಿಂದ ನಾಗರ ಹಾವು ವಿಳವಿಳ ಅಂತ ಒದ್ದಾಟ ಅನುಭವಿಸಿತ್ತು. ಸ್ಥಳೀಯರು ಇದನ್ನ ಕಂಡು ಉರಗ ರಕ್ಷಕ ಯತೀಶ್ ಕಟೀಲು ಮಾಹಿತಿ ನೀಡಿದ್ರು. ಸ್ಥಳಕ್ಕೆ ಆಗಮಿಸಿದ ಯತೀಶ್ ಹಾವನ್ನು ರಕ್ಷಣೆ ಮಾಡಿ ಶ್ಯಾಂಪ್ ಮೂಲಕ ಮೈ ತೊಳೆದು ಸಹಜ ಸ್ಥಿತಿಗೆ ತಂದು ಅನಂತರ ಕಾಡಿಗೆ ಬಿಟ್ಟಿದ್ದಾರೆ.
ಆದ್ರೆ ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್ ಎರಚಿದ ಕಾರ್ಮಿಕ ಕೂಡ ನಾಗರ ಹಾವಿನಂತೆ ಮೈ ಉರಿಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.



