ಯಕ್ಷಧ್ರುವ ಪಟ್ಲ ಪೌಂಡೇಶನ್ ವತಿಯಿಂದ 37 ನೆಯ ಶಾಲೆ, ಸರಕಾರಿ ಪ್ರೌಢಶಾಲೆ, ಕಾನಡ್ಕ ಶಕ್ತಿ ನಗರದಲ್ಲಿ ಇಂದು ಯಕ್ಷಧ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಪದವು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಕುಶಾಲ್ ಕುಮಾರ್ ಉದ್ಘಾಟಿಸಿದರು. ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರ್ ವಾಸುದೇವ ಐತಾಳ, SDMC ಅಧ್ಯಕ್ಷ ಕಿಶೋರ್, ವಿದ್ಯಾದೀವಿಗೆ ಟ್ರಸ್ಟ್ ನ ಅಶೋಕ್ ನಾಯಕ್, ಶಾಲೆಯ ಮುಖ್ಯೋಪಾದ್ಯಾಯಿನಿ ದಾಕ್ಷಾಯಿಣಿ, ಅಂಜಲಿ ಮತ್ತು ಯಕ್ಷಧ್ರುವ ಯಕ್ಷ ಶಿಕ್ಷಣದ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಶ್ವೇತ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಜಯಂತಿ ಧನ್ಯವಾದ ಸಮರ್ಪಿಸಿದರು. ಸುಮಾರು 65 ಆಸಕ್ತ ವಿದ್ಯಾರ್ಥಿಗಳು ಯಕ್ಷ ಶಿಕ್ಷಕ ವಿಶ್ವನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ನಾಟ್ಯರಂಭ ಮಾಡಿದರು.




