ಬಿಗ್‌ಬಾಸ್ ಸೀಸನ್-10ನ ಕ್ರೇಜ್ ಆರಂಭವಾಗಿದ್ದು, ಅದಕ್ಕೆ ಪೂರಕವಾಗಿ ಬಿಗ್‌ಬಾಸ್ ಕಡೆಯಿಂದ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ.

ಈ ಪ್ರೋಮೋದಲ್ಲಿ ಸುದೀಪ್ ಕೂಡಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇದೊಂದು ಊರ ಹಬ್ಬ ಎಂಬಂತೆ ಬಿಗ್‌ಬಾಸ್ ಅನ್ನು ಟೀಸರ್‌ನಲ್ಲಿ ಬಿಂಬಿಸಲಾಗಿದೆ. ಅಲ್ಲದೇ ಈ ಬಾರಿ “ಹ್ಯಾಪಿ ಬಿಗ್‌ಬಾಸ್’ ಎಂದು ಹೇಳಲಾಗಿದೆ. ಈ ಮೂಲಕ ಬಿಗ್‌ಬಾಸ್ ಸೀಸನ್ 10 ಕುತೂಹಲ ಕೂಡಾ ಹೆಚ್ಚಾಗಿದೆ



