ಪಾರಿವಾಳಗಳು ಸಾಮಾನ್ಯವಾಗಿ ಬಿಳಿ, ಬೂದು ಅಥವಾ ಕಂದು ಬಣ್ಣದಲ್ಲಿ ಇರುತ್ತಾವೆ. ಅಬ್ಬಬ್ಬ ಎಂದರೆ ಕಪ್ಪು ಬಣ್ಣದಲ್ಲಿ ನೋಡಬಹುದು. ಆದರೆ ಇಲ್ಲೊಂದು ಗುಲಾಬಿ ಬಣ್ಣದ ಪಾರಿವಾಳವನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.

ಇಂಗ್ಲೆಂಡ್ನ ಮ್ಯಾಂಚೆಸ್ಟರ್ನ ಬರಿ ಟೌನ್ ಕಟ್ಟಡ ಒಂದರ ಮೇಲೆ ಆಹಾರವನ್ನು ಹಾಕಲಾಗಿತ್ತು. ಇದನ್ನು ತಿನ್ನಲು ಬಂದಿದ್ದ ಪಾರಿವಾಳವು ಗುಲಾಬಿ ಬಣ್ಣದಲ್ಲಿದ್ದು, ಈ ಪಾರಿವಾಳ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಈ ರೀತಿ ಪಿಂಕ್ ಕಲರ್ ಪಾರಿವಾಳ ಕಾಣುವುದು ಅಪರೂಪದಲ್ಲಿ ಅತೀ ಅಪರೂಪ ಎಂದೇ ಹೇಳಬಹುದು.

ಅಲ್ಲದೇ ಮ್ಯಾಂಚೆಸ್ಟರ್ನ ಪೊಲೀಸರು ಕೂಡ ಈ ಗುಲಾಬಿ ಬಣ್ಣದ ಪಾರಿವಾಳವನ್ನು ಫೇಸ್ಬುಕ್ನಲ್ಲಿ ನೋಡಿ ಶಾಕ್ ಆಗಿದ್ದಾರೆ. ಕೆಲವು ಜನರು ಅದಕ್ಕೆ ಪಿಂಕ್ ಬಣ್ಣ ಬಳಿಯಲಾಗಿದೆ ಎಂದರೇ, ಇನ್ನು ಕೆಲವರು ಇಲ್ಲ ಅದರ ನಿಜವಾದ ಬಣ್ಣವೆಂದು ವಾದಿಸಿದ್ದಾರೆ.
ಆದರೆ ಈ ಹಿಂದೆ ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಇದೇ ರೀತಿಯ ಗುಲಾಬಿ ಬಣ್ಣದ ಪಾರಿವಾಳ ಸಿಕ್ಕಿತ್ತು. ಅದನ್ನು ರಕ್ಷಣೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಾಗ ಅದು ಅಪೌಷ್ಠಿಕತೆಯಿಂದ ಬಳಲುತ್ತಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದರು.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಇದರ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಲೈಕ್ಸ್, ಕಾಮೆಂಟ್ ಮಾಡುತ್ತಿದ್ದಾರೆ.



