ಜನ ಮನದ ನಾಡಿ ಮಿಡಿತ

Advertisement

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಡೀಲ್‌ ಪ್ರಕರಣ; ವಜ್ರದೇಹಿ ಮಠದ ಸ್ವಾಮೀಜಿ ಸ್ಪಷ್ಟನೆ

ಸಿಸಿಬಿ ವಶದಲ್ಲಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಆದಾಯ ಮತ್ತು ತೆರಿಗೆ ಇಲಾಖೆಗೆ ಪತ್ರ ಬರೆದಿದ್ದು, ಪತ್ರದಲ್ಲಿ ಅಕ್ರಮ ಹಣದ ವ್ಯವಹಾರ ಎಂದು ಬಿಂಬಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ವೇಳೆ ಐಟಿಗೆ ಪತ್ರ ಬರೆದಿದ್ದು, ಇದು ಸೆಪ್ಟೆಂಬರ್ 8 ರಿಂದ 12ರ ನಡುವೆ ಬರೆದಿರುವ ಪತ್ರ ಎನ್ನಲಾಗುತ್ತಿದೆ.

ಪತ್ರದಲ್ಲಿ ರಹಸ್ಯ ವರದಿ ಮಾಡಿ ಅವ್ಯವಹಾರ ಬಯಲಿಗೆಳೆಯುತ್ತಿದ್ದೇನೆ. ಬಿಜೆಪಿ ಟಿಕೆಟ್ ಪಡೆವ ಕಸರತ್ತು ಕುರಿತು ಪತ್ರದಲ್ಲಿ ಹೇಳಿದ್ದಾರೆ. ತಾನೊಬ್ಬ ಪ್ರತಿಷ್ಠಿತ ಮಾಧ್ಯಮದ ಪತ್ರಕರ್ತೆ ಎಂದು ಉಲ್ಲೇಖಿಸಿದ್ದು, ಗೋವಿಂದ ಬಾಬು ಪೂಜಾರಿ ಮೇಲೆ ಹಣದ ವ್ಯವಹಾರ ಮತ್ತು ಮೋಸಗಾರರ ಪಟ್ಟ ಹೊರಿಸಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಚೈತ್ರಾ ಬರೆದ ಪತ್ರದಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ಹೆಸರು ಉಲ್ಲೇಖಿಸಿದ್ದಾಳೆ. ಈ ವಿಚಾರದ ಬಗ್ಗೆ ಸ್ಪಷ್ಟಣೆ ಕೊಟ್ಟ ರಾಜಶೇಖರಾನಂದ ಸ್ವಾಮೀಜಿ ನನಗೂ ಚೈತ್ರಾ ಕುಂದಾಪುರ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಜುಲೈನಲ್ಲಿ ಹಿಂದೂ ಮುಖಂಡ ಸತ್ಯಜಿತ್‌ ಸುರತ್ಕಲ್ ಕರೆ ಮಾಡಿದ್ದರು. ಗೋವಿಂದ ಪೂಜಾರಿ ಟಿಕೆಟ್ ವಿಚಾರದಲ್ಲಿ ಪ್ರಶ್ನೆ ಮಾಡಿದ್ದರು. ನನಗೇನೂ ತಿಳಿದಿರಲಿಲ್ಲ, ಚೈತ್ರಾ, ಹಾಲಶ್ರೀ ಹೆಸರಿದೆ ಎಂದಿದ್ದರು.

ಈ ಹಿನ್ನೆಲೆಯಲ್ಲಿ ನಾನು ಚಕ್ರವರ್ತಿ ಸೂಲಿಬೆಲೆಗೆ ಫೋನ್ ಮಾಡಿ ವಿಚಾರಿಸಿದ್ದೆ. ಸೂಲಿಬೆಲೆಗೆ ವಿಚಾರ ತಿಳಿಸಿದಾಗ ಅವರು ವಿಷಯವನ್ನು ಸಿಟಿ ರವಿ ಅವರಿಗೆ ತಿಳಿಸುತ್ತೇನೆ ಎಂದಿದ್ದರು. ಸರಿ ಹಾಗೆ ಮಾಡಿ ಇಲ್ಲದಿದ್ದರೆ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ ಎಂದು ನಾವು ಹೇಳಿದೇವು. ನಂತರ ನಾನು ಚೈತ್ರ ಕುಂದಾಪುರ ಅವರಿಗೆ ಫೋನ್ ಮಾಡಿದೆ. ಫೋನ್ ಮಾಡಿದ ಕೂಡಲೇ ಅವರು ಸ್ವೀಕರಿಸಿದರು. ನಾನು ಆಗ ಹೇಳಿದೆ, ನಿಮಗೆ ಗೋವಿಂದ ಬಾಬು ಪೂಜಾರಿ ಅವರಿಂದ 3.5 ಕೋಟಿ ಹಣ ಬಂದಿದೆಯಾ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ಓ ಮೂರೂವರೆ ಕೋಟಿಗೆ ಬಂತಾ? ಎಂದು ನನಗೇ ಕೇಳಿದರು.

ಹಿಂದೆ ಎರಡೂವರೆ ಕೂಟಿ ಇತ್ತು. ಈಗ ಮೂರುವರೇ, ಮುಂದೆ ನಾಲ್ಕು, ಆಮೇಲೆ 7 ಹೀಗೆ ಅದು ಹೋಗುತ್ತಿರುತ್ತದೆ ಎಂದು ನನ್ನ ಹತ್ತಿರ ಹೇಳಿದರು. ಅದಕ್ಕೆ ನಾನು, ಸಿಟ್ಟಿನಿಂದ ಹೇಳಿದಾಗ ಇದಕ್ಕೂ ನನಗೂ ಸಂಬಂಧ ಇಲ್ಲ. ಗೋವಿಂದ ಬಾಬು ಪೂಜಾರಿ ಮನೆ ಕಟ್ಟುವ ಸಂದರ್ಭದಲ್ಲಿ ಒಬ್ಬ ಸ್ವಾಮೀಜಿ ಬೇಕು ಎಂದು ಹೇಳಿದ್ದರು. ಆಗ ನಾನು ಅವರಿಗೆ ಹಾಲಸ್ವಾಮೀಜಿಗಳನ್ನು ಪರಿಚಯ ಮಾಡಿಕೊಟ್ಟಿದ್ದೆ. ಅವರಿಬ್ಬರ ಮಧ್ಯೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ ಎಂದಿದ್ದಳು.

ಚೈತ್ರಾ ಪರಿಚಯ ಇದ್ದದ್ದು ನಿಜ, ಆದ್ರೆ ಹಣದ ವಹಿವಾಟು ಇಲ್ಲ. ಇದರಲ್ಲಿ ನಮ್ಮ ಹೆಸರು ಬಂದಾಗ ನಾವು ಚೈತ್ರಾ ಕುಂದಾಪುರಗೆ ಕರೆ ಮಾಡಿದ್ದು ನಿಜ. ಇದರಲ್ಲಿ ನಮ್ಮ ಪಾತ್ರ. ನಮ್ಮ ಹಿಂದೂ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ. ಅದೆಲ್ಲ ನಡೆಯಬಾರದು ಎಂದು ತಿಳಿದುಕೊಳ್ಳಲು ನಾವು ಫೋನ್ ಮಾಡಿದ್ದೇವೆಯೋ ಹೊರೆತು, ಇದರಲ್ಲಿ ನಮ್ಮದು ಎಳ್ಳಷ್ಟೂ ಪಾತ್ರವಿಲ್ಲ ಎಂದು ಮಂಗಳೂರಿನಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!