ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿ ಶಿವಕುಮಾರ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಖಾಲಿಯಾಗಿದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಶಿವಕುಮಾರ್ ಅವರನ್ನು ಸರಕಾರ ನಿಯುಕ್ತಿಗೊಳಿಸಿತ್ತು. ಟಿ.ಡಿ.ನಾಗರಾಜ್ ಅವರ ವರ್ಗಾವಣೆ ಬಳಿಕ ಇಲ್ಲಿಗೆ ಇನ್ಸ್ ಪೆಕ್ಟರ್ ನೇಮಕವಾಗಿರಲಿಲ್ಲ. ಚುನಾವಣೆ ಕಳೆದು ಕೆಲ ಸಮಯದ ಬಳಿಕ ಇದೀಗ ಸರಕಾರ ನೇಮಕ ಅದೇಶ ಮಾಡಿದ್ದು, ಇಂದು ಕರ್ತವ್ಯಕ್ಕೆ ಹಾಜರಾದರು.

ಇವರನ್ನು ಠಾಣೆಯಲ್ಲಿ ಹೂ ಗುಚ್ಚ ನೀಡಿ ಸ್ವಾಗತಿಸಿದ್ದಾರೆ.



