ಉಡುಪಿ: ಕಟಪಾಡಿ ಸಮೀಪದ ಮಣಿಪುರದಲ್ಲಿ ಪತ್ನಿಯೊಬ್ಬಳು ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪರಿಣಾಮ ಪತಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮೊಹಮ್ಮದ್ ಅಶ್ರಫ್ (22) ಗಾಯಗೊಂಡ ವ್ಯಕ್ತಿ. ಮೊಹಮ್ಮದ್ ಅಶ್ರಫ್ ಗೆ ಅವರ ಪತ್ನಿ ಅಫ್ರೀನ್, ಅತ್ತೆ, ಮಾವ ಮತ್ತಿತರರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮೊಹಮ್ಮದ್ ಆಸೀಫ್ ಅವರ ಎಡ ಬದಿಯ ಮುಖ, ದೇಹ, ಎಡಗೈ, ಎಡ ಬದಿಯ ಎದೆ, ಬೆನ್ನು ಬಲಕೈ ಗೆ ಗುಳ್ಳೆ ಎದ್ದಿದ್ದು, ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಹಮ್ಮದ್ ಆಸೀಫ್ ಕಾರ್ಕಳ ತಾಲೂಕಿನವರಾಗಿದ್ದು 11 ತಿಂಗಳ ಹಿಂದೆ ಉಡುಪಿ ತಾಲೂಕು ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿನ ನಿವಾಸಿ ಅಫ್ರೀನ್ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಬಳಿಕ ಅಫ್ರೀನ್ ಳು ಒಂದೂವರೆ ತಿಂಗಳು ಗಂಡನ ಮನೆಯಲ್ಲಿದ್ದು, ಬಳಿಕ ಅಲ್ಲಿ ಇರಲು ಇಷ್ಟವಿಲ್ಲವೆಂದು ಮಣಿಪುರದ ತನ್ನ ತವರು ಮನೆಗೆ ಬಂದಿದ್ದಳು. ಗಂಡ ಮೊಹಮ್ಮದ್ ಆಸೀಫ್ ಕೂಡಾ ತನ್ನ ಮನೆಯಲ್ಲಿಯೇ ಇರ ಬಹುದೆಂದು ತಿಳಿಸಿದ ಮೇರೆಗೆ ಅವರು ಸುಮಾರು 9 ತಿಂಗಳುಗಳಿಂದ ಹೆಂಡತಿಯ ಮನೆಯಲ್ಲಿಯೇ ವಾಸವಿದ್ದಾರೆ. ಅಫ್ರೀನ್ ಳಿಗೆ ಗಂಡ ಮೊಹಮ್ಮದ್ ಆಸೀಫ್ ಗೆ ಬೇರೆ ಹುಡುಗಿಯ ಜತೆ ಸಂಬಂಧ ಇದೆ ಎಂಬ ಅನುಮಾನವಿದ್ದು, ಈ ಬಗ್ಗೆ ಯಾವಾಗಲೂ ಗಂಡನ ಜತೆ ಜಗಳವಾಡುತ್ತಿದ್ದಳು.
ಸೆ. 17 ರಂದು ಸಂಜೆ 6:45 ಗಂಟೆಗೆ ಮೊಹಮ್ಮದ್ ಆಸೀಫ್ ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ಸಮಯ ಪತ್ನಿ ಅಫ್ರೀನ್ ಹೊರಗಿನಿಂದ ಬಾಗಿಲು ಬಡಿದಿದ್ದು, ಮೊಹಮ್ಮದ್ ಆಸೀಫ್ ಬಾಗಿಲನ್ನು ತೆರೆದಾಗ ಆಕೆ ತನ್ನ ಕೈಯಲ್ಲಿದ್ದ ಸ್ಟೀಲಿನ ಪಾತ್ರೆಯಲ್ಲಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಗಂಡನ ಮೈ ಮೇಲೆ ಎರಚಿದ್ದಾಳೆ. ಮೊಹಮ್ಮದ್ ಆಸೀಫ್ ಕೂಗಾಡುತ್ತಾ ಮನೆಯಿಂದ ಹೊರಗಡೆ ಓಡಿದ್ದು, ಆಗ ಮಾವ ಹುಸೈನ್ ಅವರು ಮೊಹಮ್ಮದ್ ಆಸೀಫ್ ಅವರನ್ನು ಸಮಧಾನಪಡಿಸಿ ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ.
ಮೈಮೇಲೆ ಬಿಸಿ ನೀರನ್ನು ಹಾಕಿದ ಪರಿಣಾಮ ಮೊಹಮ್ಮದ್ ಆಸೀಫ್ ಅವರ ದೇಹದಲ್ಲಿ ಗುಳ್ಳೆ ಎದ್ದಿದ್ದು, ಈ ಬಗ್ಗೆ ಆಸ್ಪತ್ರೆಗೆ ಹೋಗುತ್ತೇನೆಂದು ತಿಳಿಸಿದಾಗ ಅಫ್ರೀನ್, ಅತ್ತೆ ಮೈಮುನಾ, ಮಾವ ಹುಸೈನ್ ಹಾಗೂ ನೆರೆಮನೆಯ ಲತೀಫ್ ಆವರು ಸೇರಿ ಹೊರಗಡೆ ಹೋಗಲು ಬಿಡದೆ ಅವರನ್ನು ಮನೆಯ ರೂಮಿನಲ್ಲಿಯೇ ಕೂಡಿ ಹಾಕಿರುತ್ತಾರೆ. ಅಲ್ಲದೆ ಅಫ್ರೀನ್‌ಳು ಮೊಹಮ್ಮದ್ ಆಸೀಫ್ ರವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ.
ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…