ದಕ್ಷಿಣ ಕನ್ನಡ : ಭಾರಿ ಸುದ್ದಿಯಲ್ಲಿರುವ ಚೈತ್ರ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣದಲ್ಲಿ ಸಾಲುಮರದ ತಿಮ್ಮಕ್ಕನ ಹೆಸರು ತಳಕು ಹಾಕಿಕೊಂಡಿರುವುದಕ್ಕೆ ಸಾಲುಮರದ ತಿಮ್ಮಕ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ̤

ಕುಟುಂಬದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದ ಸಾಲುಮರದ ತಿಮ್ಮಕ್ಕ ಮಾಧ್ಯಮದಲ್ಲಿ ಪ್ರಸಾರವಾದ ವರದಿ ಆಧಾರ ರಹಿತ, ಅವಿವೇಕದ ವರದಿ ಎಂದು ಪ್ರತಿಭಟಿಸಿದ ಕುರಿತು ವರದಿಯಾಗಿದೆ.
ಈ ಸಂಬಂಧ ಮಾತನಾಡಿದ ಹಿರಿಯ ಜೀವಿ ಸಾಲುಮರದ ತಿಮ್ಮಕ್ಕ ಅವರು, ವಂಚನೆ ಪ್ರಕರಣದಲ್ಲಿ ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಹೆಸರು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡಲಾಗಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ, ಪೊಲೀಸ್ ಕಮಿಷನರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ
ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಅವರ ವಂಚನೆ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಪ್ರಕರಣಕ್ಕೆ ತಳುಕು ಹಾಕಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಸಂಪೂರ್ಣ ಜೀವನವನ್ನೇ ನೆಲ, ಜಲ, ಪರಿಸರಕ್ಕೆ ಮೀಸಲಿಟ್ಟಿದ್ದೇನೆ. ಸರ್ಕಾರ ನೀಡಿದ ಸವಲತ್ತುಗಳನ್ನು ಬೇರೆಯವರಿಗೆ ನೀಡಿ ವಂಚನೆ ಮಾಡಲು ಅವಕಾಶ ಮಾಡಿಕೊಟ್ಟಿದ್ಧೇವೆ ಎಂದು ಸುದ್ದಿ ವಾಹಿನಿಯೊಂದು ವರದಿ ಪ್ರಸಾರ ಮಾಡಿದೆ.
ವರದಿ ಮಾಡಿದವರು ಸಾಕ್ಷ್ಯಗಳನ್ನು ನೀಡಲಿ. ಕಲ್ಪಿತ ವರದಿ ಮಾಡಿ ಗೌರವಕ್ಕೆ ಧಕ್ಕೆ ತರಲಾಗಿದೆ’, ವರದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ, ಹಾಗೂ ವರದಿ ಮಾಡಿದವರು ಸಾಕ್ಷಿ ಒದಗಿಸುವಂತೆ ಸಾಲುಮರದ ತಿಮ್ಮಕ್ಕ ಆಗ್ರಹಿಸಿದ್ದಾರೆ.



