ಪುತ್ತೂರು: ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದ್ದು,ಶಾಸಕರಾದ ಅಶೋಕ್ ರೈ ನೇತೃತ್ವದ ನಿಯೋಗ ಅರಮನೆ ಮೈದಾನದಲ್ಲಿ ಕರೆ ನಿರ್ಮಾಣ ಮಾಡಬೇಕಾದ ಸ್ಥಳವನ್ನು ವೀಕ್ಷಣೆ ಮಾಡಿದರು.
ತುಳುನಾಡಿನ ಜನಪದ ಕಲೆಯಾದ ಕಂಬಳವು ಈಬಾರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದು, ಬೆಂಗಳೂರು ಜನತೆ ಸೇರಿದಂತೆ ಬೆಂಗಳೂರಿನಲ್ಲಿರುವ ವಿವಿಧ ರಾಜ್ಯಗಳ ಜನತೆ , ವಿದೇಶಿಯರು ಈ ಬಾರಿ ಕಂಬಳವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕಂಬಳ ಉಳಿವಿಗಾಗಿ ಸುಪ್ರಿಂಕೋರ್ಟು ಮೆಟ್ಟಿಲೇರಿ ಯಶಸ್ವಿಯಾದ ಅಶೋಕ್ ರೈಗಳು ಈ ಬಾರಿ ರಾಜ್ಯದ ರಾಜಧಾನಿಯಲ್ಲೇ ಕಂಬಳವನ್ನು ಆಯೋಜನೆ ಮಾಡುವ ಮೂಲಕ ತುಳುನಾಡಿನ ಜನಪದ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದಾರೆ.
ಕಂಬಳದ ಕರೆ ನಿರ್ಮಾಣಕ್ಕಾಗಿ ಸ್ಥಳವನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು ಮುಂದಿನ ವಾರ ಕರೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್, ಬೆಂಗಳೂರು ತುಳು ಒಕ್ಕೂಟದ ಅಧ್ಯಕ್ಷರಾದ ಸುಂದರ್‌ರಾಜ್ ರೈ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಬೆಂಗಳೂರು ಲಿಕ್ಕರ್ ಎಸೋಶಿಯೇಶನ್ ಉಪಾಧ್ಯಕ್ಷರಾದ ಕರುಣಾಕರ್ ಹೆಗ್ಡೆ, ಅಕ್ಷಯರೈ ದಂಬೆಕಾನ, ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ್ ರೈ ಮಠಂತಬೆಟ್ಟು, ರಾಜ್‌ಕುಮಾರ್ ರೈ, ರಾಕೇಶ್ ರೈ , ಪ್ರಶಾಂತ್ ರೈ ಕೈಕಾರ, ಮಂಜುನಾಥ ಕನ್ಯಾಡಿ, ಕರುಣಾಕರ ಸಾಮಾನಿ, ಶರತ್ , ರಾಜೇಶ್ ಶೆಟ್ಟಿ ಕೋಡಿಂಬಾಡಿ, ಯತೀಶ್ ಕನಕಪುರ, ಆದರ್ಶ ಶೆಟ್ಟಿ, ಅಶ್ವಿನ್ ಪೂಜಾರಿ , ದೀಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಖ್ಯಾತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ದಕ್ಷಿಣ…
ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ಕಾರಂತ ಪ್ರಶಸ್ತಿ ಸಮಿತಿ ನೀಡುವ 2026ನೇ ಸಾಲಿನ…
ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆಯೊಂದು ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ನಡೆದಿದೆ. ಹೆದ್ದಾರಿಯಲ್ಲಿ ಕಾರು ಸಂಚರಿಸುತ್ತಿದ್ದ…
ಅಂತಾರಾಷ್ಟ್ರೀಯ ಹಾಗೂ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ತೀರಾ ಕಡಿಮೆಯಾಗಿದ್ದು, ಇತರ…
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…