ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.) ಮoಗಳೂರು ಇದರ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ ವಿಶ್ವ ಬಂಟರ ಸಮ್ಮೇಳನ-2023 ಉಡುಪಿ ಅಜ್ಜರಕಾಡು ಮೈದಾನದಲ್ಲಿ ಅಕ್ಟೊಬರ್ 28 ಮತ್ತು 29 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭರದ ಕೆಲಸ ಕಾರ್ಯಗಳು ನಡೆಯುತ್ತಿದೆ̤

ನಾಡಿನ ಗಣ್ಯರು ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಅಂತೆಯೇ, ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾಕೂಟ”* ಹಾಗೂ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ಸ್ಟಿಕರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಅನಾವರಣಗೊಳಿಸಿದರು.

ಇನ್ನು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸಭಾಂಗಣದಲ್ಲಿ, ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸದಾನಂದ ಶೆಟ್ಟಿಯವರು ಕರಪತ್ರವನ್ನು ಅನಾವರಣಗೊಳಿಸಿದರು. ಇನ್ನು ಲಯನ್ಸ್ ಕ್ಲಬ್ ನ ಸಭಾಂಗಣದಲ್ಲಿ ನಡೆದ ಯಕ್ಷದ್ರುವ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ಲಿ. ಇದರ ಪ್ರಥಮ ವಾರ್ಷಿಕ ಸಭೆಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಕರಪತ್ರವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಚಂದ್ರಹಾಸ್ ಡಿ ಶೆಟ್ಟಿ, ವಸಂತ್ ಶೆಟ್ಟಿ, ರತ್ನಾಕರ್ ಶೆಟ್ಟಿ ಎಕ್ಕಾರ್, ಡಾ. ಆಶಾ ಜ್ಯೋತಿ ರೈ, ರಾಜ್ ಗೋಪಾಲ್ ರೈ, ಸುರೇಶ್ಚಂದ್ರ ಶೆಟ್ಟಿ, ದೇವಿಚರಣ್ ಶೆಟ್ಟಿ, ಭಾಸ್ಕರ್ ರೈ ಕುಕ್ಕುವಳ್ಳಿ,ವಿಜಯಲಕ್ಷ್ಮಿ ಬಿ. ಸುಧಾಕರ್ ಪೂಂಜ ಸುರತ್ಕಲ್, ಪುರುಷೋತ್ತಮ್ ಭಂಡಾರಿ ಅಡ್ಯಾರ್, ಯಕ್ಷದ್ರುವ ಸೌಹಾರ್ದ ಕೋ- ಅಪರೇಟಿವ್ ಸೊಸೈಟಿ ಇದರ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.



