ಬಂಟ್ವಾಳ: ಕೆಲ ದಿನಗಳಿಂದ ಇಡ್ಕಿದು ಗ್ರಾಮದ ಮುಂಡ್ರಬೈಲು ಎಂಬಲ್ಲಿ ಹದಿಹರೆಯದ ಯುವಕರ ತಂಡ ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಬಂದು ಗಾಂಜಾ ಮತ್ತು ಮಾದಕ ವಸ್ತುವನ್ನು ಸೇವಿಸಿ ಮಹಿಳೆಯರಿಗೆ ತೊಂದರೆ ಕೊಡುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇಂದು ಕಾಟ ನೀಡಲು ಬಂದ ಮೂವರು ಯುವಕರು ಪೋಲಿಸರು ವಶಕ್ಕೆ ಪಡೆದಕೊಂಡ ಘಟನೆ ನಡೆದಿದೆ.


ಮಾದಕ ವಸ್ತು ಸೇವಿಸಿ ನಶೆಯೇರಿ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಗೆ ತಿಳಿಸಿದ್ದರು. ಈ ದಿನ ಆದಿತ್ಯವಾರ ರಜಾ ದಿನವಾದ ಕಾರಣ ಮಾಹಿತಿ ತಿಳಿದ ಗ್ರಾಮಸ್ಥರು ಇಂದು ಕಾದು ಕುಳಿತಿದ್ದರು. ಇವತ್ತು ಅದೇ ಮಾದರಿಯಲ್ಲಿ ತನ್ನ ಚೇಷ್ಟೆ ಮಾಡಲು ಬಂದ ಯುವಕರು ಇನ್ನೇನು ತಮ್ಮ ಕೆಲಸ ಮಾಡಬೇಕೆನ್ನುವಷ್ಟರಲ್ಲಿ ಅವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಕಂಬಳಬೆಟ್ಟು ನೂಜಿ ನಿವಾಸಿಗಳಾದ ಸಾಹಿಲ್, ಶಾಝ್, ಜಾಯಿ ಎನ್ನಲಾಗಿದೆ. ಆರೋಪಿಗಳಿಂದ 1 ಬೈಕ್ ಹಾಗೂ 1 ಸ್ಕೂಟರ್‌ನ್ನು ವಶಕ್ಕೆ ಪಡೆಯಲಾಗಿದೆ. ಈ ಮೊದಲು 3 ಜನರಲ್ಲೊಬ್ಬ ನೆಲ್ಲಿಗುಡ್ಡೆ ಎಂಬಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ವಿಚಾರದಲ್ಲಿ ಸ್ಥಳೀಯರಿಂದ ಗೂಸಾ ತಿಂದಿದ್ದ ಎಂಬ ಮಾಹಿತಿ ತಿಳಿದುಬಂದಿದೆ.



