ದಕ್ಷಿಣ ಕನ್ನಡ: ತುಳು ಭಾಷೆಯಲ್ಲಿ ಪ್ರಪ್ರಥಮ ಬಾರಿಗೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ತುಳು ಭಾಗವತಿಕೆ ಸಹಿತ ತುಳು ಭಾಷೆಯಲ್ಲಿ ಸಿರಿ ದೇವಿ ಮೈಮೆ ಎಂಬ ಪ್ರಸಂಗ ದೊಂದಿಗೆ ನೂತನ ಪ್ರಯೋಗ ನಡೆಯಲಿದೆ.

ಸಪ್ಟೆಂಬರ್ 30ರಂದು ಮಂಗಳೂರು ಪುರಭವನದಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11:00 ವರೆಗೆ ನಡೆಯಲಿರುವ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕನ್ಯಾನ ಸದಾಶಿವ ಶೆಟ್ಟಿ ಅವರ ಮಾತೃಶ್ರೀಯವರಾದ ಶ್ರೀಮತಿ ಲಲಿತಾ ಶೆಟ್ಟಿ ಅವರು ಕನ್ಯಾನ ಸದಾಶಿವ ಶೆಟ್ಟಿಯವರಿಗೆ ನೀಡಿ ಬಿಡುಗಡೆಗೊಳಿಸಿದರು. ತುಳುವೆರೆ ಆಯನೊ ಕೂಟ ಕುಡ್ಲ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂಸ್ಥೆಯ ಅಧ್ಯಕ್ಷರಾದ ಶಮಿನ ಆಳ್ವ, ಕಾರ್ಯದರ್ಶಿ ರಾಜೇಶ್ ಹೆಗ್ಡೆ ಪೊಳಲಿ, ಗೋಪಾಡ್ಕರ್, ಆಶಾ ಸೆಟ್ಟಿ ಅತ್ತಾವರ, ಗೀತಾ ಹೆಗ್ಡೆ, ಭಾರತಿ ಶೆಟ್ಟಿ ಮೂಲ್ಕಿ, ಭೂಷಣ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಡಾ. ರಾಜೇಶ್ ಆಳ್ವ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ತುಳುವೆರೆ ಕರ್ಣೆ ಎಂಬ ಬಿರುದು ಪ್ರಧಾನ ನಡೆಯಲಿದೆ. ಅಂತೆಯೇ ಸಿರಿ ದೇವಿ ಮೈಮೆ ಪುಸ್ತಕ ಬಿಡುಗಡೆ ಮತ್ತು ವಾಯ್ಸ್ ಆಫ್ ಆರಾಧನ ಮಕ್ಕಳಿಂದ ಜೋಕ್ಲೆ ಮಿನದನ ಕಾರ್ಯಕ್ರಮ ನಡೆಯಲಿದೆ. ತುಳುವರ ಬಹು ದಿನಗಳ ನಿರೀಕ್ಷೆಯಾದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ತುಳು ಭಾಷೆಯಲ್ಲಿ ಆಡಿತೋರಿಸಬೇಕೆಂಬ ಕನಸು ನನಸಾಗಲಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸರಪಾಡಿ ಅಶೋಕ್ ಶೆಟ್ಟಿಯವರ ಸಂಯೋಜನೆಯಲ್ಲಿ ಈ ಯಕ್ಷಗಾನ ರಂಗೇರಲಿದ್ದು, ನಾಲ್ಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದರ ಭಾಗವಹಿಸುವಿಕೆ ವಿಶೇಷ ಮೆರುಗು ನೀಡಲಿದೆ.



