ದಕ್ಷಿಣ ಕನ್ನಡ : ಇತ್ತೀಚಿಗೆ ಮೂಡುಬಿದರೆ ಜರುಗಿದ ಗಣೇಶ ಉತ್ಸವವು, ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ರಹಿತ ಗಣೇಶೋತ್ಸವವಾಗಿದ್ದು, ಶೋಭಾ ಯಾತ್ರೆ ಸಂದರ್ಭದಲ್ಲಿ ಮತ್ತು ನಂತರದಲ್ಲಿ ನಡೆದ ಸ್ವಚ್ಛತೆ ದೇಶಕ್ಕೆ ಮಾದರಿ ಎನಿಸುವಂಥದ್ದು ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ.

ಪುರಸಭಾ ಕಾರ್ಮಿಕರ, ಅಧಿಕಾರಿಗಳ ಹಾಗೂ ಕೈಜೋಡಿಸಿದ ಸಂಘ ಸಂಸ್ಥೆಗಳ ಸದಸ್ಯರ ಜನ ಮೆಚ್ಚುವಂಥ, ಪರಿಸರ ಸ್ನೇಹಿ ಜೊತೆಗೆ ಸ್ವಚ್ಛತೆಯು ಜನತೆಯ ಜೊತೆಗೆ ಸ್ವತಃ ಗಣಪನೆ ಮೆಚ್ಚುವಂಥದ್ದು ಗಣಪತಿ ದೇವರು ಶೋಭಾ ಯಾತ್ರೆಯಲ್ಲಿ ಜನಸ್ತೋಮದೊಂದಿಗೆ ಮುಂದೆ ಸಾಗುತ್ತಿದಂತೆ ಅದಾಗಲೇ ಪುರಸಭಾ ಕಾರ್ಮಿಕರು ತಮ್ಮ ಸ್ವಚ್ಛತಾ ಕೆಲಸ ಪ್ರಾರಂಭಿಸಿದ್ರು, ಆ ತಡ ರಾತ್ರಿ ಇಷ್ಟು ಸಂಖ್ಯೆಯ ಹೆಮ್ಮೆಯ ಕಾರ್ಮಿಕರು ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ರಸ್ತೆಯುದ್ಧಕ್ಕೂ ಚೆಲ್ಲಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು. ಪುರಸಭೆ ವತಿಯಿಂದ ಅಲ್ಲಲ್ಲಿ ಕಸ ಹಾಕಲು ಚೀಲ ಇರಿಸಿದ್ದರು, ಸ್ವಚ್ಛತೆ ಬಗ್ಗೆ ಸಾಕಷ್ಟು ಪ್ರಚಾರವನ್ನು ಕೈಗೊಂಡಿದ್ದರು. ಆದರೂ ಹಲವು ಅಜ್ಞಾನಿಗಳು ಇದನ್ನು ಉಪಯೋಗಿಸಿಲ್ಲ ಎಂಬುದು ಬೇರೆ ಮಾತು.

ಇಷ್ಟೊಂದು ಸಾವಿರ ಜನ ಸೇರಿದ್ದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಿಂದ ಉಂಟಾದ ತ್ಯಾಜ್ಯವನ್ನು ತಕ್ಷಣವೇ ಸ್ವಚ್ಛಗೊಳಿಸಿದ ಪುರಸಭೆ ಕಾರ್ಮಿಕರಿಗೆ ಹ್ಯಾಟ್ಸಾಫ್ ಎನ್ನಲೇಬೇಕು. ಇದರ ಹಿಂದೆ ಶ್ರಮವಹಿಸಿದ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಸಹಕಾರಕ್ಕೆ ಜೈ ಎನ್ನಲೇ ಬೇಕು. ಅಷ್ಟು ಸ್ವಚ್ಛ ವಾಗಿತ್ತು ನಗರ.
ಬುದ್ಧಿವಂತ ಪ್ರಜ್ಞಾವಂತ ಕರಾವಳಿ ಕರ್ನಾಟಕದ ನಾಗರಿಕರು ಮುಂದೆ ನಡೆಯುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ರೀತಿಯ ಕ್ರಮ ಕೈಗೊಂಡಲ್ಲಿ ಸ್ವಚ್ಛ ಭಾರತ್, ಶ್ರೇಷ್ಠ ಭಾರತ, ಆರೋಗ್ಯ ಭಾರತವಾಗುವುದರಲ್ಲಿ ಸಂಶಯವಿಲ್ಲ. ಮುಂದೆ ನಾವೆಲ್ಲರೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸ್ವಚ್ಛತೆ ಬಗ್ಗೆ ಮಾದರಿ ಕಾರ್ಯಕ್ರಮವನ್ನು ರೂಪಿಸೋಣ… ಏನಂತೀರಿ……






