ಮುಲ್ಕಿ: ನೆಹರು ಯುವ ಕೇಂದ್ರ ಮಂಗಳೂರು, ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ (ರಿ.)ತೋಕೂರು , ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ(ರಿ.) ತೋಕೂರು ಇವರ ಜಂಟಿ ಆಶ್ರಯದಲ್ಲಿ ತೋಕೂರು ಗ್ರಾಮದಲ್ಲಿ “ನನ್ನ ಮಣ್ಣು ನನ್ನ ದೇಶ “ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿರುವ ವೀರಯೋಧರಿಗೆ ನಮನ ಸಲ್ಲಿಸಲಾಯಿತು ಮತ್ತು ದೇಶದ ರಕ್ಷಣೆಗಾಗಿ ಪ್ರತಿಜ್ಞೆ ಕೈಗೊಳ್ಳಲಾಯಿತು. ಅಭಿಯಾನದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಅನುಪಮಾ ಎ. ರಾವ್, ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಯಶೋದಾ ಪಿ. ರಾವ್, ಯುವಕ ಸಂಘದ ಹಿರಿಯ ಸದಸ್ಯರಾದ ದಾಮೋದರ್ ಶೆಟ್ಟಿ ವಿನೋದ ಭಟ್, ಪುಷ್ಪ ಜಿ ಭಂಡಾರಿ, ರತ್ನ ಭಂಡಾರಿ,ಪ್ರಫುಲ್ಲ ಆರ್ ಶೆಟ್ಟಿ ಉಪಸ್ಥಿತರಿದ್ದರು.



