ಬಂಟ್ವಾಳ: ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ದ 2022-23 ನೇ ವಾರ್ಷಿಕ ಮಹಾಸಭೆ ನಲ್ಕೆಮಾರ್ ನಲ್ಲಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದ ಪ್ರತಿಯೊಬ್ಬ ವ್ಯಕ್ತಿಗೂ ಸೇವೆ ಸಿಗಬೇಕು ಎಂಬ ಧ್ಯೇಯವನ್ನು ಹೊಂದಿದ್ದು, ಕೃಷಿಕರ ಬೆನ್ನೆಲುಬು ಆಗಿ ಸದಾ ಜೊತೆಯಲ್ಲಿ ಇರಬೇಕು, ಆ ಮೂಲಕ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂಬ ಯೋಚನೆಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಈಗಾಗಲೇ ಕೇಂದ್ರ ಕಚೇರಿಯ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸಂಘದ ಎಲ್ಲಾ ಶಾಖೆಗಳಿಗೂ ಸ್ವಂತ ಕಟ್ಟಡದ ಕನಸನ್ನು ಕಂಡಿದ್ದು, ಸದಸ್ಯರ ಸಹಕಾರ ಬೇಕು ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಕಾರ್ಯವನ್ನು ಸ್ವಂತ ಕಟ್ಟಡದಲ್ಲಿ ಮಾಡಬೇಕು ಎಂಬ ಯೋಚನೆ ಮಾಡಲಾಗಿದ್ದು, ಸರ್ವರ ಸಹಕಾರ ಬೇಕಾಗಿದೆ. ಸ್ವಂತ ಕಟ್ಟಡದಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ನಡೆಯಲು ಸಹಕಾರಿಯಾಗುವ ನಿಟ್ಟಿನಲ್ಲಿ ಮಿನಿ ಹಾಲ್ ನಿರ್ಮಾಣ ಜೊತೆಗೆ ಕೃಷಿಕರ ಕೃಷಿ ಚಟುವಟಿಕೆಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ವಿವಿಧ ಸವಲತ್ತುಗಳನ್ನು ನೀಡುವ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಸಂಘದಲ್ಲಿ 4486 ಎ. ತರಗತಿ ಸದಸ್ಯರಿದ್ದು, ವರ್ಷಾಂತ್ಯಕ್ಕೆ ರೂ. 36.92 ಕೋಟಿ ಠೇವಣಿ, ರೂ.27.82 ಕೋಟಿ ಸಾಲ ಇದ್ದು ಸಂಸ್ಥೆಯು ರೂ. 157.88 ಕೋಟಿ ವ್ಯವಹಾರ ನಡೆಸಿ, ಸದಸ್ಯರಿಗೆ ಶೇ 8 ಪರ್ಸೆಂಟ್ ಡಿವಿಡೆಂಡ್ ನೀಡಲಾಗಿದೆ ಎಂದು ಅವರು ತಿಳಿಸಿದರು. ಸಂಘವು ಶೇ.99.04 ಸಾಲ ವಸೂಲಾತಿ ಮಾಡಿ ಆಡಿಟ್ ವರ್ಗೀಕರಣದಲ್ಲಿ ” ಎ “ತರಗತಿಯ ಸ್ಥಾನಮಾನ ಪಡೆದಿದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಸಾಧನೆಯ ದಾರಿಯಲ್ಲಿ ಇನ್ನಷ್ಟು ಮುನ್ನಡೆಯಬೇಕು,ಅದಕ್ಕಾಗಿ ಸರ್ವರೂ ಸಂಘದಲ್ಲಿಯೆ ಠೇವಣಿದಾರರಾಗಿ, ಸಾಲ ಸೌಲಭ್ಯಗಳನ್ನು ಪಡೆದುಕೊಂಡು, ಸಕಾಲದಲ್ಲಿ ಮರುಪಾವತಿ ಮಾಡಿ ಸಂಸ್ಥೆಯನ್ನು ಪ್ರಗತಿ ಪಥದಲ್ಲಿ ಸಾಗಿಸಲು ಸಹಕಾರ ನೀಡಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪದ್ಮನಾಭ ರಾವ್, ನರಸಿಂಹ ಹೊಳ್ಳ, ತೋಮಸ್ ಸಲ್ದಾನ, ಅನಿಲ್ ಪಿಂಟೋ, ಪೂರ್ಣಿಮಾ ಕೆಂಪುಗುಡ್ಡೆ, ಪೂರ್ಣಿಮಾ ಬೆದ್ರಗುಡ್ಡೆ, ಪ್ಲೋಸಿ ಡಿಸೋಜ,ರಮೇಶ್, ಕಮಲಾಕ್ಷ, ಶಿವಪ್ರಸಾದ್ ಕನಪಾಡಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ವಾರ್ಷಿಕ ವರದಿಯನ್ನು ನೀಡಿದರು. ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿಧ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ಆಲ್ವಿನ್ ವಿನಯ ಲೋಬೊ ಸ್ವಾಗತಿಸಿ, ಬಿ. ಸುರೇಶ್ ಭಂಡಾರಿ ಅರ್ಬಿ ವಂದಿಸಿದರು. ಸಿಬ್ಬಂದಿ ಆಲ್ವಿನ್ ವೇಗಸ್ ವಿದ್ಯಾರ್ಥಿ ವೇತನ ಪಡೆದ ಮಕ್ಕಳ ಪರಿಚಯಿಸಿದರು. ಲೊರೆಟ್ಟೋ ಶಾಖೆಯ ವ್ಯವಸ್ಥಾಪಕ ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ :
ಅಮ್ಟಾಡಿ ಸೇವಾ ಸಹಕಾರಿ ಸಂಘ ನಿಯಮಿತ ಇದರ ಕೇಂದ್ರ ಕಚೇರಿಯ ನೂತನ ಸ್ವಂತ ಕಟ್ಟಡಕ್ಕೆ ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ನಲ್ಕೆಮಾರ್ ಎಂಬಲ್ಲಿ ಬ್ಯಾಂಕಿನ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಈ ಸಂಧರ್ಭದಲ್ಲಿ ಹಿರಿಯ ಸದಸ್ಯರಾದ ರಾಮಣ್ಣ ಪೂಜಾರಿ ಕಂಗಿತ್ತಲು, ತಿಮ್ಮಪ್ಪ ಆಚಾರ್ಯ ಕುರಿಯಾಳ, ಎಡ್ರಿ ಮೊತೆಂರೊ ತೊಡೆಂಬಿಲ,ತಾಚಪ್ಪ ಪೂಜಾರಿ ಕುರಿಯಾಳ, ಫೆಲ್ಸಿ ಫರ್ನಾಂಡೀಸ್ ತಲೆಂಬಿಲ, ಸದಾಶಿವ ಡಿ.ತುಂಬೆ, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ ಮತ್ತಿತರರು ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…