ಮೂಡುಬಿದರೆ: ‘ಪಠ್ಯಕ್ರಮದ ನೈಜ ಭಾಗೀದಾರರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅವರೇ ಬಲಿಪಶು ಆಗುತ್ತಿದ್ದಾರೆ’ ಎಂದು ಪುತ್ತೂರು ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಇಂಗ್ಲಿಷ್ ವಿಭಾಗವು ಹಮ್ಮಿಕೊಂಡ ಸರಣಿ ಅತಿಥಿ ಉಪನ್ಯಾಸ ಹಾಗೂ ‘ವೇಟಿಂಗ್ ಫಾರ್ ಗೊಡೊಟ್’ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಠ್ಯಕ್ರಮವನ್ನು ತಿಳಿದುಕೊಳ್ಳುವ ಹಕ್ಕು ವಿದ್ಯಾರ್ಥಿಗಳಿಗೆ ಇದೆ. ಆದರೆ, ಅವರಲ್ಲಿ ಪ್ರಶ್ನಿಸುವ ಮನೋಭಾವ ಕಾಣದಾಗಿದೆ. ಇನ್ನೊಂದೆಡೆ ಪಠ್ಯಕ್ರಮ ರೂಪಿಸುವ ‘ಕಟ್ ಪೇಸ್ಟ್ ‘ ತಜ್ಞರು ಕಂಪ್ಯೂಟರ್ ಬರುವ ಮೊದಲೇ ಇದ್ದರು’ ಎಂದು ವಿವರಿಸಿದರು.
‘ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ತರಗತಿ ಚಟುವಟಿಕೆ ಮಧ್ಯೆ ಅಂತರವಿದೆ. ಪಠ್ಯದಲ್ಲಿ ಘೋಷಿತ ಧ್ಯೇಯಗಳಿವೆ. ಕಲಿಕೆ ಮೇಲೆ ಕಲಿಕೆ ಕಟ್ಟಬೇಕು. ಪ್ರಚಲಿತ ವಿದ್ಯಮಾನಕ್ಕೆ ಶಿಕ್ಷಣ ಸ್ಪಂದಿಸಬೇಕು. ಆದರೆ, ವಿಶ್ವವಿದ್ಯಾಲಯ ಇಷ್ಟು ಸಂವೇದನೆ ಹೊಂದಿದೆಯೇ?’ ಎಂದು ಅವರು ಪ್ರಶ್ನಿಸಿದರು.
‘ಇಂದು ಜ್ಞಾನದ ಮೊದಲ ಸ್ಪರ್ಶ ತರಗತಿಯಲ್ಲಿ ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಏನು ಕಲಿಸುತ್ತೀರಿ ಎಂಬುದಕ್ಕಿಂತ ಹೇಗೆ ಕಲಿಸುತ್ತೀರಿ’ ಎಂಬುದು ಮುಖ್ಯ ಎಂದ ಅವರು, ‘ನೀವೇ ಬರೆಯಲು ಇನ್ನೊಬ್ಬರನ್ನು ಅವಲಂಬಿಸುತ್ತಿದ್ದೀರಿ ಎಂದಾದರೆ, ನಿಮ್ಮ ಮಕ್ಕಳಿಗೆ ಏನು ಬೋಧನೆ ಮಾಡುತ್ತಿದ್ದೀರಿ’ ಎಂದು ಕುಟುಕಿದರು.
‘ಶಿಕ್ಷಣದ ಗುರಿ ಮತ್ತು ದಾರಿ ಮಧ್ಯೆ ಹೊಂದಾಣಿಕೆ ತಪ್ಪಿದೆ. ಪ್ರಕ್ರಿಯೆ ಮತ್ತು ಉದ್ದೇಶಗಳ ನಡುವೆ ಸಮತೋಲನ ಇಲ್ಲ. ಉತ್ತಮ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಕಟ್ಟಬೇಕು’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ನಂಬಿಕೆಗಳನ್ನು ಕಾಲಕಾಲಕ್ಕೆ ಪ್ರಶ್ನಿಸಿ ಮರುರೂಪುಗೊಳಿಸಿದಾಗ ಮಾತ್ರ ಪ್ರಗತಿ ಸಾಧ್ಯ’ ಎಂದು ಹೇಳಿದರು.
‘ನಂಬಿಕೆಯ ಬಲೆಯು ನಮ್ಮನ್ನು ನಡೆಸಿದರೂ, ನಾವು ಹೇಗೆ ಹೆಜ್ಜೆ ಇಡುತ್ತೇವೆ ಎಂಬುದು ಮುಖ್ಯ’ ಎಂದರು.
‘ಪ್ರತಿ ವ್ಯಕ್ತಿಯ ಬದುಕಿನ ಪಯಣ ವಿಭಿನ್ನ. ಉತ್ತಮ ಸಂಬಂಧಗಳನ್ನು ನಾವು ಬದುಕಿನಲ್ಲಿ ಪಡೆದಿದ್ದೇವೆಯೇ ಎಂಬುದು ಬಹಳ ಮುಖ್ಯವಾಗುತ್ತದೆ’ ಎಂದರು.
ಉಜಿರೆ ಎಸ್ ಡಿಎಂ (ಸ್ವಾಯತ್ತ) ಕಾಲೇಜು ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಸೂರ್ಯನಾರಾಯಣ ಭಟ್ ‘ವೇಟಿಂಗ್ ಫಾರ್ ಗೊಡೊಟ್’ ಕುರಿತು ಉಪನ್ಯಾಸ ನೀಡಿದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಛೇಂದ್ರ, ಸಹಾಯಕ ಪ್ರಾಧ್ಯಾಪಕ ಸಂದೇಶ್ ಇದ್ದರು.
ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿದರು. ರೇಷ್ಮಾ ಹಾಗೂ ಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ಚಂದನಾ ಕಾರ್ಯಕ್ರಮ ನಿರೂಪಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…