ಕಾವೇರಿ ವಿಚಾರವನ್ನು ರಾಜಕೀಯಗೊಳಿಸ್ತಿರೋದು ರಾಜಕಾರಣಕ್ಕೆ ಹೊರತು ಜನರ ಹಿತದೃಷ್ಟಿಯಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕಾವೇರಿ ವಿಚಾರವನ್ನು ರಾಜಕೀಯಗೊಳಿಸ್ತಿರೋದು ರಾಜಕಾರಣಕ್ಕೆ ಹೊರತು ಜನರ ಹಿತದೃಷ್ಟಿಯಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ‘ಬೆಂಗಳೂರು ಬಂದ್’ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಬಂದ್ ಮಾಡಲು, ಪ್ರತಿಭಟನೆ ಮಾಡಿದ್ರೆ ನಮಗೇನೂ ಅಡ್ಡಿ ಇಲ್ಲ. ಆದರೆ ರಾಜಕೀಯ ದೃಷ್ಟಿಯಿಂದ ಬೆಂಗಳೂರು ಬಂದ್ ಮಾಡಿಸಲಾಗಿದೆ. ರಾಜ್ಯದ ಹಿತ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ. ನಮ್ಮದೇನೂ ತಕಾರರು ಇಲ್ಲ. ಯಾಕಂದರೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕು, ಅವಕಾಶ ಇದೆ. ಆದ್ರೆ ಕೋರ್ಟ್ ಈ ಬಗ್ಗೆ ನಿರ್ಬಂಧ ಹೇರಿದ್ದು, ನಮ್ಮ ಮೂಲ ಹಕ್ಕುಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ, ಬೇರೆಯವ ಮೂಲ ಹಕ್ಕುಗಳಿಗೆ ದಕ್ಕೆ ಆಗಬಾರದು ಎಂದು ಹೇಳಿದೆ. ಹೀಗಾಗಿ ಪ್ರತಿಭಟನೆ ನಡೆಸುತ್ತಿರೋರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು. ಬಿಜೆಪಿ ನಿನ್ನೆ ಮಂಡ್ಯದಲ್ಲಿ ಚಡ್ಡಿ ಚಳವಳಿ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ. ಈ ಮೊದಲು ನಾವು ಬಿಜೆಪಿಗರನ್ನು ಚಡ್ಡಿ ಎಂದು ಕರೆಯುತ್ತಿದ್ದೇವು. ಪಾಪ ಅವರು ಪ್ರತಿಭಟನೆ ಮಾಡಲಿ, ಆದರೆ ಈ ವಿಚಾರದಲ್ಲಿ ಅವರು ರಾಜಕೀಯ ಮಾಡಬಾರದು. ರಾಜಕೀಯ ಲಾಭಕ್ಕಾಗಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಅವರು ಪ್ರತಿಭಟಿಸಿದ್ದರೆ ಒಳ್ಳೆಯದು ಎಂದರು. ಇದೇ ವೇಳೆ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರವನ್ನು ಅವರೇ ಪ್ರಸ್ತಾಪಿಸಿ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅದು ರಾಜ್ಯದ ಹಿತ ದೃಷ್ಟಿಯಿಂದ ಒಳ್ಳೆಯದು. ಆದರೆ ಕರ್ನಾಟಕ ಸರ್ಕಾರ ಕಾವೇರಿ ನೀರು ವಿಚಾರದಲ್ಲಿ ವಿಫಲವಾಗಿದೆ ಎಂದು ಹೇಳೋದು ರಾಜಕೀಯ. ಕರ್ನಾಟಕ ಸರ್ಕಾರ ಯಾವತ್ತೂ ರಾಜ್ಯದ ಹಿತವನ್ನು ಕಾಪಾಡಲು ಹಿಂದೆ ಬಿದ್ದಿಲ್ಲ. ನಮಗೆ ಅಧಿಕಾರ ಮುಖ್ಯವಲ್ಲ, ರಾಜ್ಯದ ಹಿತ ಮುಖ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.



