ಮಿಜಾರು: ಆಳ್ವಾಸ್ ಎಂಜಿನಿಯರಿ0 ಗ್ ಮತ್ತು ತಂತ್ರಜ್ಞಾನ ಕಾಲೇಜಿನ ‘ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿ0ಗ್ (LEEE) ವಿದ್ಯಾರ್ಥಿ ಘಟಕವನ್ನುLEEE ಮಂಗಳೂರು ಘಟಕದ ಅಧ್ಯಕ್ಷರಾದ ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕರಾದ ಡಾ. ಮೋಹಿತ್ ಪಿ. ತಹಿಲಿಯಾನಿ ಉದ್ಘಾಟಿಸಿದ್ರು.

ಬಳಿಕ ಮಾತನಾಡಿದ ಅವರು, ಐಇಇಇ ತಂಡ ಸ್ಥಾಪನೆಯಿಂದ ಎಂಜಿನಿಯರಿ0ಗ್‌ನ ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿ0ಗ್ ವಿಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಸಂಶೋಧನಾ ಲೇಖನಗಳು, ನಿಯತಕಾಲಿಕಗಳು ಇತ್ಯಾದಿ ಜೊತೆ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಕಲ್ಪಿಸಲು ಐಇಇಇ ನೆರವಾಗಲಿದೆ ಎಂದರು.

ದೈನಂದಿನ ಬಳಕೆಯ ಅಂತರ್ಜಾಲ, ವೈಫೈ, ಬ್ಲ್ಯೂಟೂತ್ ಇತ್ಯಾದಿಗಳನ್ನು ಐಇಇಇ ಉನ್ನತೀಕರಿಸಲಿದೆ. LEEE ಒಟ್ಟು 10 ಜಾಗತಿಕ ‘ಪ್ರದೇಶ’ ಎಂದು ವಿಭಜಿಸಿದೆ. LEEE ಭಾರತದ ಮಂಡಳಿಯನ್ನು 1976ರ ಮೇ 20ರಂದು ಸ್ಥಾಪಿಸಲಾಗಿದ್ದು, ಇದು ಏಷ್ಯಾ ಫೆಸಿಪಿಕ್ ಪ್ರದೇಶದ ಐದು ಮಂಡಳಿಗಳಲ್ಲಿ ಒಂದಾಗಿದೆ. ಇವೆಲ್ಲ ಆಯಾ ಪ್ರದೇಶದ ಬೇಡಿಕೆಗೆ ಸ್ಪಂದಿಸಲಿದೆ. ಅಂತಹ 13 ಘಟಕಗಳು ದೇಶದಲ್ಲಿವೆ. ಈ ಪೈಕಿ ಬೆಂಗಳೂರು 10ನೇ ಘಟಕವಾಗಿದ್ದು, ಬೆಂಗಳೂರಿನ ಉಪಘಟಕದ ಪೈಕಿ ಮಂಗಳೂರು ಒಂದಾಗಿದೆ. ಆಳ್ವಾಸ್ ಎಂಜಿನಿಯರಿ0ಗ್ ಮತ್ತು ತಂತ್ರಜ್ಞಾನ ಕಾಲೇಜು ಮಂಗಳೂರು ಉಪ ಘಟಕ 22ನೇ ವಿದ್ಯಾರ್ಥಿ ಘಟಕವಾಗಿದೆ. ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡೀಸ್ ಮಾತನಾಡಿ, ವೃತ್ತಿಪರ ಸಮಾಜದಲ್ಲಿ ಹೆಚ್ಚು ಹೆಚ್ಚು ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಎಂದರು.
LEEE ಬೋಧಕ ಸಮಾಲೋಚಕರಾದ ಡಾ.ಮಂಜುನಾಥ ಕೊಠಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ LEEE ವಿದ್ಯಾರ್ಥಿ ಘಟಕದ ಅಧ್ಯಕ್ಷ ನೀರವ್ ವಿ. ಪಟೇಲ್, ಸಹ ಅಧ್ಯಕ್ಷೆ ಗಾಯತ್ರಿ ಸಿ.ಬಿ. ಇದ್ದರು. ಕಾಲೇಜಿನ ವಿವಿಧ ನಿಕಾಯಗಳ ಡೀನ್, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



