ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ತಂಡ ಶೂಟಿಂಗ್ ವಿಭಾಗದ 50 ಮೀಟರ್ 3 ಪೊಸಿಷನ್ ವಿಭಾಗದಲ್ಲಿ ಬಂಗಾರ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದೆ.

ಮಹಿಳೆಯರ 50 ಮೀಟರ್ 3 ರೈಫಲ್ ಪೊಸಿಷನ್… ವಿಭಾಗದ ಫೈನಲ್…ನಲ್ಲಿ 469.6 ಅಂಕಗಳನ್ನು ಗಳಿಸುವ ಮೂಲಕ ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಭಾರತಕ್ಕೆ ಐದನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದೇ ವೇಳೆ ಆಶಿ ಚೌಕ್ಸಿ ಕಂಚಿನ ಪದಕವನ್ನು ಪಡೆದಿದ್ದಾರೆ. ಒಂದೇ ವಿಭಾಗದಲ್ಲಿ ಭಾರತ ಎರಡು ಪದಕಗಳನ್ನು ಪಡೆದು ಇತಿಹಾಸ ಸೃಷ್ಟಿ ಮಾಡಿದೆ.
ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಗೋಲ್ಡ್ ಮೆಡಲ್‌ಗಳ ಸಂಖ್ಯೆ ಸದ್ಯ ಐದಕ್ಕೇರಿದೆ.



