ದಕ್ಷಿಣ ಕನ್ನಡ ; ಬೆಂಗಳೂರಿನ ಏನ್. ಬಿ. ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆ, ವೈಟ್ ಫೀಲ್ಡ್ ನ ಫ್ಲೋಕ್ಸ್ ಗ್ಲೋವ್ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಆಯೋಜಿಸಿದ್ದ, ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ವಿಭಾಗದಲ್ಲಿ ಮಂಗಳೂರು ಕಾವೂರಿನ ಈಶಿಕಾ ಮೊದಲ ರನ್ನರ್ ಅಪ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಈಶಿಕಾ ಅವರು ಶ್ವೇತಾ ಹಾಗೂ ಶರತ್ ಶೆಟ್ಟಿ ದಂಪತಿಗಳ ಮಗಳಾಗಿದ್ದು, ಶರತ್ ಶೆಟ್ಟಿ ಅವರು ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಸಹಾಯಕ ಆರಕ್ಷಕ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಇವರ ತಾಯಿ ಶ್ವೇತಾ ಗೃಹಿಣಿಯಾಗಿದ್ದಾರೆ. ಇವರು ತಮ್ಮ ಮಗಳ ಬಗ್ಗೆ ಮಾಧ್ಯಮದವರ ಜೊತೆ ಮಾತಾನಾಡಿ, ಈಶಿಕಾ ಸಾಧನೆಯ ಬಗ್ಗೆ ಸಂತಸವನ್ನು ಹಂಚಿಕೊ0ಡಿದ್ದಾರೆ. ಈಶಿಕ ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು, ತಮ್ಮ ಮಗಳ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ.
ಇನ್ನೂ ಈ ಬಗ್ಗೆ ಸ್ವತಃ ಈಶಿಕಾರವರು ಮಾತಾನಾಡಿ, ತಾಯಿ ತಂದೆಯ ನಿರಂತರ ಪ್ರೋತ್ಸಾಹ, ಬಂಧು ಬಾಂಧವರ ಹಾಗೂ ಸಂಬAಧ ಪಟ್ಟ ಅಧ್ಯಾಪಕರುಗಳ ಮಾರ್ಗದರ್ಶನ, ಪ್ರೇರಣೆ ಸಾಧನೆಗೆ ಸಹಕಾರಿಯಾಯಿತು ಎಂದರು.

ಮಂಗಳೂರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಈಶಿಕಾರವರು ಕೀರ್ತಿಯನ್ನು ತಂದಿದ್ದಾರೆ. ಮಿಸ್ ಟೀನ್ ಟ್ಯಾಲೆಂಟೆಡ್ ಪ್ರಶಸ್ತಿ ಯನ್ನೂ ತಮ್ಮದಾಗಿಸಿಕೊಂಡು ಸಮಕಾಲೀನ ಯುವತಿರಲ್ಲಿ ತನ್ನನ್ನು ತಾನು ಸಾಧಕರ ಸಾಲಿನಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಈಶಿಕಾ ಇವರು ಇನ್ನಷ್ಟು ಸಾಧನೆ ಮಾಡಲಿ ಎನ್ನುವುದು ನಮ್ಮೆಲ್ಲರ ಆಶಯ.



