ಜನ ಮನದ ನಾಡಿ ಮಿಡಿತ

Advertisement

ದತ್ತು ಗ್ರಾಮ ಕೆದಂಬಾಡಿಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಎನ್‌ ಎಸ್‌ ಎಸ್‌ ವತಿಯಂದ ಅರಣ್ಯ ವಿಸ್ತರಣಾ ಕಾರ್ಯಕ್ರಮ.

ಪುತ್ತೂರು : ಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ಮಾನವರಾದ ನಾವು ಎಲ್ಲವನ್ನೂ ಪ್ರಕೃತಿಯ ಮಡಿಲಿನಿಂದ ಪಡೆಯುತ್ತೇವೆ. ನಾವೇನೇ ಸಾಧನೆ ಮಾಡಿದರೂ ಅದು ಪ್ರಕೃತಿಯ ಕೊಡುಗೆ. ಪ್ರಕೃತಿಯು ಮನುಕುಲದ ಸೊತ್ತು. ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಕಾಲೇಜಿನ ಎನ್‌ ಎಸ್‌ ಎಸ್‌ ಘಟಕಗಳು ಒಂದು ಉಪಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ” ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾಆಂಟೊನಿ ಪ್ರಕಾಶ್‌ ಮೊಂತೆರೋರವರು ಅಭಿಪ್ರಾಯಪಟ್ಟರು.

ಅವರು ಕಾಲೇಜಿನ ರಾಷ್ಟ್ರೀಯ ಸೇವಾಯೋಹನೆಯ ವತಿಯಿಂದ ದತ್ತುಗ್ರಾಮವಾದ ಕೆದಂಬಾಡಿಯ ನಿಡ್ಯಾಣದ ಸರ್ವೇನಂಬ್ರ 7/P1 ಸರಕಾರಿ ಜಾಗದಲ್ಲಿ ನಡೆದ ಅರಣ್ಯ ವಿಸ್ತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಎನ್‌ ಎಸ್‌ ಎಸ್‌ ಕಾರ್ಯಕ್ರಮಾಧಿಕಾರಿಯಾದ ವಾಸುದೇವ ಎನ್‌ ರವರು “ಉಷ್ಣವಲಯದಲ್ಲಿರುವ ಭಾರತದಂತಹ ದೇಶಗಳಲ್ಲಿ ಒಟ್ಟು ಭೂಭಾಗದ ಶೇಕಡಾ 33ರಷ್ಟು ಪ್ರದೇಶದಲ್ಲಿ ಅರಣ್ಯವನ್ನು ಹೊಂದಿರಬೇಕು. ಆದರೆ ಈಗಿನ ಅಂಕಿ ಅಂಶಗಳ ಪ್ರಕಾರ ಶೇಕಡಾ 22ರಿಂದ 24 ಮಾತ್ರವೇ ಅರಣ್ಯ ಪ್ರದೇಶವಿದೆ. ಅರಣ್ಯದ ಕೊರತೆ ಪ್ರಾಕೃತಿಕ ವೈಪರೀತ್ಯಗಳಿಗೆ ಕಾರಣವಾಗುತ್ತದೆ. ಈ ದಿಸೆಯಲ್ಲಿ ಕಾಲೇಜಿನ ಎನ್‌ ಎಸ್‌ ಎಸ್‌ ಘಟಕಗಳ ವಿತಯಿಂದ ದತ್ತು ಗ್ರಾಮದಲ್ಲಿ ಅರಣ್ಯ ವಿಸ್ತರಣೆಯ ಪುಟ್ಟ ಪ್ರಯತ್ನ” ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ ಎಸ್‌ ಎಸ್‌ ಸ್ವಯಂಸೇವಕರು ಸಾಗುವಾನಿ, ಬೇಂಗ, ಹಲಸು, ಹೆಬ್ಬಲಸು, ಬೀಟಿ, ನೇರಳೆ, ಪುನರ್ಪುಳಿ ಮುಂತಾದ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು. ಈ ಕಾರ್ಯಕ್ರಮಕ್ಕೆ ಕೆದಂಬಾಡಿ ಗ್ರಾಮ ಪಂಚಾಯತ್‌ ಸಂಪೂರ್ಣ ಸಹಕಾರ ನೀಡಿದ್ದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಜಿತ್‌ ಜಿ ಕೆ, ಅಧ್ಯಕ್ಷರಾದ ಸುಜಾತ ಎನ್‌, ಉಪಾಧ್ಯಕ್ಷರಾದ ಜಯಲಕ್ಷ್ಮಿ, ಸದಸ್ಯರಾದ ವಿಠಲರವರು ಸಕ್ರಿಯವಾಗಿ ಪಾಲ್ಗೊಂಡರು. ಕಾಲೇಜಿನ ಎನ್‌ ಎಸ್‌ ಎಸ್‌ ಕಾರ್ಯಕ್ರಮಾಧಿಕಾರಿಯಾದ ಪುಷ್ಪ ಎನ್‌, ಕಾರ್ಯದರ್ಶಿ ವೈಷ್ಣವಿ ಕೆ, ಘಟಕ ನಾಯಕರಾದ ಸಿಂಚನ್‌, ಕಾಲೇಜಿನ ಹಿತೈಷಿ ಪೊನ್ನಪ್ಪರವರು ಹಾಗೂ ಎನ್‌ ಎಸ್‌ ಎಸ್‌ ಸ್ವಯಂಸೇವಕರು ಭಾಗವಹಿಸಿದರು.

Leave a Reply

Your email address will not be published. Required fields are marked *

ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ…!

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

error: Content is protected !!