ಉಳ್ಳಾಲದ ಸೀಗ್ರೌಂಡ್‌ನಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಠಾಣಾಧಿಕಾರಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಆಜಾದನಗರ ಮಾಸ್ತಿಕಟ್ಟೆ ನಿವಾಸಿ ಫಝಲ್ ಹಾಗೂ ಮುಕ್ಕಚ್ಚೇರಿ ಕಡಪ್ಪುರದ ಸಮೀರ್ ಬಂಧಿತ ಆರೋಪಿಗಳು. ಖಚಿತ ಸುಳಿವಿನ ಮೇರೆಗೆ ಪೊಲೀಸ್ ತಂಡ ಸೀ ಗ್ರೌಂಡ್ ಬೀಚ್ ಮೇಲೆ ದಾಳಿ ನಡೆಸಿದ್ದು, ಆರೋಪಿಗಳು 14 ಗ್ರಾಂ ಎಂಡಿಎಂಎ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಬಾಲಕೃಷ್ಣ, ಪಿಎಸ್ ಐ ಶೀತಲ್, ಸಿಬ್ಬಂದಿಗಳಾದ ರಂಜಿತ್, ಅಕ್ಬರ್, ಅಶೋಕ್, ಮಂಜು, ವೆಂಕಟೇಶ್ ಭಾಗವಹಿಸಿದ್ದರು.



