ಪುಣಚ ಗ್ರಾಮದ ಮಲೆತ್ತಡ್ಕ ನಿವಾಸಿಯೊಬ್ಬರು ಬುಧವಾರದಿಂದ ನಾಪತ್ತೆಯಾಗಿದ್ದು, ತೋಟದ ಕೆರೆಯಲ್ಲಿ ಮೃತ ದೇಹ ಗುರುವಾರ ಪತ್ತೆಯಾಗಿದೆ.

ಪುಣಚ ಗ್ರಾಮದ ಮಲೆತ್ತಡ್ಕ ನಿವಾಸಿ ಜಯರಾಮ ಭಟ್ ಅವರು ಮೃತ ವ್ಯಕ್ತಿಯೆಂದು ತಿಳಿದು ಬಂದಿದೆ. ಬುಧವಾರ ಬೆಳಗ್ಗೆ ಮಗುವನ್ನು ಶಾಲೆ ಬಿಟ್ಟು, ಬಳಿಕ ನಾಪತ್ತೆಯಾಗಿದ್ದರು. ತೋಟದಲ್ಲಿ ನಡೆದು ಹೋಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ.



