ಪಕ್ಷಿಕೆರೆ : ಪ್ರವಾದಿ ಜನ್ಮದಿನಾಚರಣೆಯ ಪ್ರಯುಕ್ತ ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಈದ್ ಮಿಲಾದ್ ಪ್ರಯುಕ್ತ ಮಸೀದಿಯ ಅಧ್ಯಕ್ಷರಾದ ಕೆ. ಯು. ಮಹಮ್ಮದ್ ಇವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ. ಮಯ್ಯದಿ, ಖತೀಬರಾದ ಅಧಮ್ ಅಮನಿ ಉಸ್ತಾದ್, ಸದಸ್ಯರಾದ ಪಲ್ಲಿ ಕುಟ್ಟಿಹಾಜಿ, ಬಿ. ಎಂ. ಅಬ್ದುಲ್ ರಜಾಕ್, ಡಿಜೆ ಮೊಹಮ್ಮದ್ ಮುಸ್ಲಿಯಾರ್, ಹಾಗೂ ಜಮಾತಿನ ಸರ್ವ ಮುಸ್ಲಿಂ ಬಾಂಧವರು ಹಾಗೂ ಅರೇಬಿಕ್ ಮದರಸ ಮಕ್ಕಳು ಭಾಗವಹಿಸಿದರು.



