ಜನ ಮನದ ನಾಡಿ ಮಿಡಿತ

Advertisement

ಕರ್ನಾಟಕ ಬಂದ್‌ಗೆ ಪಿರಿಯಾಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ಔಷಧಿ ಅಂಗಡಿ, ಹಾಲಿನ ಬೂತ್, ಬ್ಯಾಂಕ್, ಸರ್ಕಾರಿ ಕಚೇರಿಗಳು, ಅಗತ್ಯ ವಸ್ತುಗಳ ಅಂಗಡಿ ಎಂದಿನ0ತೆ ತೆರೆದು ಕಾರ್ಯನಿರ್ವಹಿಸಿದವು, ಗ್ರಾಮಾಂತರ ಪ್ರದೇಶಗಳಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯರ್ಥವಾಯಿತು.

ಪಟ್ಟಣದ ಸಂತೆಮಾಳ ಬಳಿಯ ಹೂ ಹಾಗೂ ತರಕಾರಿ ಮಾರುಕಟ್ಟೆ ಎಂದಿನ0ತೆ ಕಾರ್ಯ ನಿರ್ವಹಿಸಿತು, ಮುಂಜಾಗ್ರತ ಕ್ರಮವಾಗಿ ಸಾರಿಗೆ ಸಂಚಾರದಲ್ಲಿ ಬೆಳಿಗ್ಗೆಯಿಂದ ಮೈಸೂರು ಬೆಂಗಳೂರು ಮಡಿಕೇರಿ ಮಂಗಳೂರು ಸೇರಿದಂತೆ ಗ್ರಾಮಾಂತರ ಪ್ರದೇಶಕ್ಕೆ ಪಿರಿಯಾಪಟ್ಟಣದಿಂದ ಸಾರಿಗೆ ವ್ಯವಸ್ಥೆ ನಿಲ್ಲಿಸಿದ್ದರಿಂದ ಸಾರ್ವಜನಿಕರ ಸಂಚಾರ ವಿರಳವಾಗಿತ್ತು, ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್, ಎಇಇ ವಸಂತ್, ಸಹಾಯಕ ಸಂಚಾರ ಅಧೀಕ್ಷಕ ಕುಮಾರ್, ಸಂಚಾರ ನಿಯಂತ್ರಕ ಶ್ರೀನಿವಾಸ್, ಸುರೇಶ್, ರಾಘು, ಬಸ್ ನಿಲ್ದಾಣದಲ್ಲಿದ್ದು ಮುಂಜಾಗ್ರತೆ ವಹಿಸಿದ್ದರು, ಮಧ್ಯಾಹ್ನ ಬಳಿಕ ಸಾರಿಗೆ ಸಂಚಾರ ಆರಂಭವಾಯಿತು.


ಖಾಸಗಿ ವಾಹನಗಳು ಎಂದಿನ0ತೆ ಸಂಚರಿಸಿದವು. ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ತಾಲೂಕಿನ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಸರ್ಕಲ್ ಇನ್ಸೆ÷್ಪಕ್ಟರ್ ಕಚೇರಿ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಬೆಟ್ಟದಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟಿಸಿ ತಹಶೀಲ್ದಾರ್ ಕುಂ ಇ ಅಹಮದ್ ಅವರಿಗೆ ಮನವಿ ನೀಡಿದರು. ಪ್ರತಿಭಟನೆಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಬೆಂಬಲ ಸೂಚಿಸಿದರು.

ಈ ಸಂದರ್ಭ ರೈತ ಸಂಘ ತಾಲೂಕು ಅಧ್ಯಕ್ಷ ಕೆ.ಎಸ್ ಸ್ವಾಮಿಗೌಡ ಪದಾಧಿಕಾರಿಗಳಾದ ಗುರುರಾಜ್, ನವೀನ್ ರಾಜೆ ಅರಸ್, ದಶರತ್, ಪಿ.ಮಹದೇವ್, ಮಹೇಶ್, ಗಣೇಶ್, ಮಂಜುನಾಥ್, ಬಾಲರಾಜೆ ಅರಸ್, ಸುರೇಶ್, ಹರೀಶ್, ಜವರಪ್ಪ, ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ದಿನೇಶ್, ರಾಮೇಗೌಡ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಸಿ.ಎಸ್ ಜಗದೀಶ್, ತಮ್ಮಣ್ಣಯ್ಯ, ದಾಸರಾಜ್, ರಾಜು, ಮೂಲ ನಿವಾಸಿ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬೆಟ್ಟದತುಂಗಾ ರಾಜು, ಜಿಲ್ಲಾ ಮಹಿಳಾಧ್ಯಕ್ಷೆ ರತ್ನಮ್ಮ, ವೆಂಕಟೇಶ್, ಚನ್ನಬಸವ, ಬಿಜೆಪಿ ಮುಖಂಡರಾದ ಕೌಲನಹಳ್ಳಿ ಸೋಮಶೇಖರ್, ಲೋಕಪಾಲಯ್ಯ ಮತ್ತಿತರಿದ್ದರು, ಈ ವೇಳೆ ಬಿ.ಎಂ ಮುಖ್ಯರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು, ಪಿರಿಯಾಪಟ್ಟಣ ಪೋಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ನೀಡಿದ್ದರು, ಬಂದ್‌ಗೆ ಪಟ್ಟಣದ ಕೆಲವರ್ತಕರು ಬೆಳಿಗ್ಗೆಯಿಂದ ತಮ್ಮ ಅಂಗಡಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರೆ ಹಲವರು ಮಧ್ಯಾಹ್ನದ ಬಳಕೆ ತೆರೆದು ಎಂದಿನ0ತೆ ವ್ಯಾಪಾರ ನಡೆಸಿದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!