ಬಂಟ್ವಾಳ: ವಾಯುಭಾರ ಕುಸಿತ ಕಂಡ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಎಡೆಬಿಡದೆ ಬಿಡದೆ ಸುರಿಯುವ ಗಾಳಿ ಮಳೆಗೆ ತಾಲೂಕಿನ ಅನೇಕ ಕಡೆಗಳಲ್ಲಿ ಮಳೆಹಾನಿಯಾಗಿ ಲಕ್ಷಾಂತರ ರೂ ಹಾನಿಯಾಗಿದೆ.

ಈಗಾಗಲೇ ಸುಮಾರು ಆರು ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಗಾಳಿ ಮಳೆಗೆ ಮನೆಯ ಹಂಚುಗಳು ನೆಲಕ್ಕುರಳಿದ ಘಟನೆ ಹಾಗೂ ಮನೆಯ ಗೋಡೆಗಳು ಕುಸಿದು ಬಿದ್ದ ಘಟನೆಗಳು ನಡೆದಿದ್ದು, ಮನೆಯವರಿಗೆ ವಾಸ ಮಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಂಟ್ವಾಳ ಕಸಬಾ ಗ್ರಾಮದ ಮಣಿಹಳ್ಳ ಎಂಬಲ್ಲಿ ಈ ದಿನ ಬಂದ ಬಾರಿ ಬಿರುಗಾಳಿ ಹಾಗೂ ಮಳೆಗೆ ಭವಾನಿ ಮೂಲ್ಯ, ಶ್ರೀಮತಿ ಆಚಾರಿ, ಪೂರ್ಣಿಮಾ ,ಗುಲಾಬಿ, ಗುಲಾಬಿ, ಲಕ್ಷ್ಮಣ ಮೂಲ್ಯ ರವರ ಮನೆಗಳ ಹಂಚು ಮೇಲ್ಛಾವಣಿಗೆ ಬಾಗಶ: ಹಾನಿಯಾಗಿದೆ.

ಘಟನೆ ನಡೆದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕವಾಗಿ ವಾಸ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಾರೆ. ಜೊತೆಗೆ ಹಾನಿಯಾದ ಎಲ್ಲಾ ಮನೆಗಳಿಗೂ ಸರಕಾರದ ಪಾಕೃತಿಕ ವಿಕೋಪದಡಿಯಲ್ಲಿ ಪರಿಹಾರವನ್ನು ನೀಡಲಾಗುವ ಭರವಸೆ ನೀಡಿದ್ದಾರೆ.



