ತುಳುವೆರೆ ಆಯನೊ ಕೂಟ ಕುಡ್ಲ ವತಿಯಿಂದ ಮಂಗಳೂರು ಪುರಭವನದಲ್ಲಿ ಪ್ರಪ್ರಥಮ ಬಾರಿಗೆ ತುಳು ಭಾಗವತಿಕೆ ಸಹಿತ ಯಕ್ಷಲೋಕದ ದಿಗ್ಗಜ ಕಲಾವಿದರ ಸಮಾಗಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ್ ಶೆಟ್ಟಿ ಇವರ ಸಂಯೋಜನೆಯಲ್ಲಿ ನಡೆಯುತ್ತಿರುವ ಸಿರಿ ದೇವಿ ಮಹಾತ್ಮೆ ಯಕ್ಷಗಾನ ಹಾಗೂ ಸಭಾ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಭಾಗವಹಿಸಿ ಮಾತನಾಡಿದರು.







