ಭಾರತ ಸರಕಾರ ನೆಹರೂ ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ( ರಿ) ಹಳೆಯಂಗಡಿ ಇದರ ಆಶ್ರಯದಲ್ಲಿ ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಜಿಲ್ಲಾ ಪ್ರಶಸ್ತಿ ಪುರಸ್ಕೃತ, ಯುವತಿ ಮತ್ತು ಮಹಿಳಾ ಮಂಡಲ ಹಳೆಯಂಗಡಿ ಇದರ ಸಹಕಾರದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರದ ಕಾರ್ಯಕ್ರಮದ ಅಡಿಯಲ್ಲಿ ದೇಶಾದ್ಯಂತ 01.09.2023 ರಿಂದ 31.10.2023 ರ ವರೆಗೆ ನಡೆಯುತ್ತಿರುವ “ನನ್ನ ಮಣ್ಣು ನನ್ನ ದೇಶ” MERI MATI MERA DESH ” ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸಂಜೆ 5.00 ಗಂಟೆಗೆ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿ ಕುಟುಂಬದ ಮನೆಗಳಿಗೆ ತೆರಳಿ “ಅಮೃತ ಕಲಶಕ್ಕೆ ಮಣ್ಣನ್ನು ಹಾಕುವ” ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಕೂಡ ಉಪಸ್ಥಿತರಿದ್ದು ಸಹಕರಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್ ಟಿ. ಜಿ., ಪ್ರಧಾನ ಕಾರ್ಯದರ್ಶಿ ಹಿಮಕರ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯ ಅಧ್ಯಕ್ಷರಾದ ಸುಧಾಕರ ಅಮೀನ್, ಸಲಹಾ ಸಮಿತಿಯ ಅಧ್ಯಕ್ಷರಾದ ಮೋಹನ್ ಬಂಗೇರ, ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಪ್ರವೀಣ್, ರಾಷ್ಟೀಯ ಸೇವಾ ಯೋಜನೆ ಗೋವಿಂದ ದಾಸ್ ಕಾಲೇಜು ಸುರತ್ಕಲ್ ಇದರ ಅಧಿಕಾರಿಗಳಾದ ಅಕ್ಷತಾ ನವೀನ್, ಯುವತಿ ಮಂಡಲದ ಕಾರ್ಯದರ್ಶಿ ದಿವ್ಯಶ್ರೀ ಕೋಟ್ಯಾನ್, ಕೋಶಾಧಿಕಾರಿ ನಿರ್ಮಿತ, ಸದಸ್ಯರುಗಳಾದ ಲೋಕೇಶ್ ಚಿಲಿಂಬಿ, ಪಲಿಮಾರು ಜಗದೀಶ್ ಪಾವಂಜೆ, ಯೋಗಿಶ್ ಪಾವಂಜೆ, ಯಶ್, ಮಂಜು ಮಹೇಶ್, ಸುಹಾಸ್ ಗೊಳಿದಡಿ, ವಿದ್ಯಾರ್ಥಿಗಳಾದ ನೇಹಾ, ಶಶಿಪ್ರಭ, ಭೂಮಿಕಾ, ಪ್ರಂಜಲಿ, ಧನ್ಯಶ್ರೀ, ಪ್ರತೀಕ್ಷಾ, ಜೀವನ್, ವರುಣ್, ಶ್ರೀನಿವಾಸ್ ಉಪಸ್ಥಿತರಿದ್ದರು.









