ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..! ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!
Advertisement

ಮೂಲ್ಕಿ: ನೀರಿಗೆ ಬಿದ್ದು ಮೃತಪಟ್ಟ ಸುಮಂತ್ ಆತ್ಮಹತ್ಯೆಯಲ್ಲ ಅದು ವ್ಯವಸ್ಥಿತ ಕೊಲೆ – ಲೋಕೇಶ್ ಪಡುಬಿದ್ರಿ

ಮೂಲ್ಕಿ: ತೋಕೂರು ನಿವಾಸಿ ಸುಮಂತ್ ನೀರಿಗೆ ಬಿದ್ದು ಮೃತಪಟ್ಟ ಘಟನೆ ಆತ್ಮಹತ್ಯೆಯಲ್ಲ ಅದು ವ್ಯವಸ್ಥಿತ ಕೊಲೆ ಪ್ರಕರಣ ಎಂಬ ಸಂಶಯವಿದ್ದು ಪೋಲೀಸರು ಈ ಬಗ್ಗೆ ತನಿಖೆ ನಡೆಸಿ ಮೃತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಅಂಬೆಡ್ಕರ್ ಯುವ ಸೇವೆ ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರಿ ಹೇಳಿದರು.
ಮೂಲ್ಕಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 16 ದಿನದ ಹಿಂದೆ ನಾಪತ್ತೆಯಾದ ತೋಕೂರು ನಿವಾಸಿ ಸುಮಂತ್ ಮೃತದೇಹವು ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತೆಯಾಗಿದ್ದು ಕಳೆದ 9ದಿನಗಳ ಹಿಂದೆ ಆತನ ಬಟ್ಟೆ ಪಾದರಕ್ಷೆ ಮೊಬೈಲ್ ನದಿ ದಂಡೆಯಲ್ಲಿ ಲಭ್ಯವಾದ ಬಳಿಕ ನದಿಯಲ್ಲಿ ಮುಳುಗುಗಾರರನ್ನು ಬಳಸಿ ಪರಿಶೀಲನೆ ನಡೆಸದಿರುವುದು ಮುಲ್ಕಿ ಪೊಲೀಸರ ನಿರ್ಲಕ್ಷತನವಾಗಿರುತ್ತದೆ. ಮೃತ ಸುಮಂತ್ ಅನುಭವಿ ಈಜು ಹಾಗೂ ಮುಳುಗುಗಾರ ಈತ ಆಳ ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯುವ ಕಾಯಕ ಮಾಡುತ್ತಿದ್ದ ಕಾರಣ ಆತ ನೀರಿನಲ್ಲಿ ಮುಳುಗಿ ಸಾಯಲು ಸಾಧ್ಯವಿಲ್ಲ.ಆತನ ಬಟ್ಟೆ ಸಿಕ್ಕಿದ ಜಾಗದಲ್ಲಿ ಕೇವಲ ಸೊಂಟ ಮಟ್ಟದ ನೀರು ಇದ್ದು ಆತ ಅಲ್ಲಿ ಸಾಯಲು ಸಾಧ್ಯವಿಲ್ಲ ಯಾರೋ ಆತನನ್ನು ಕೊಲೆಮಾಡಿ ಶವ ಬಚ್ಚಿಟ್ಟು ಬಳಿಕ ನೀರಿಗೆ ಹಾಕಿರುವ ಬಗ್ಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.


ಸುಮಂತ್ 19 ವರ್ಷದ ಹುಡುಗ ಅಜ್ಜಿ ಮನೆಗೆ ಹೋಗುತ್ತೇನೆಂದು ಹೋದವ ನಾಪತ್ತೆಯಾಗಿರುವ ಬಗ್ಗೆ ಸೆಪ್ಟೆಂಬರ್ 15 ರಂದು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರ ಬಳಿ ಕುಟುಂಬಸ್ಥರು ವಿಚಾರಿಸಿದಾಗ ಅಲ್ಲಿಇದ್ದಾನೆ ಇಲ್ಲಿ ಇದ್ದಾನೆ, ಹುಲಿವೇಶದವರೊಂದಿಗಿದ್ದಾನೆ ಎಂದು ಹೇಳಿ ಅವರನ್ನು ವಾಪಾಸು ಕಳುಹಿಸುತ್ತಿದ್ದರು. ಸೆಪ್ಟೆಂಬರ್ 24 ರಂದು ಹಳೆಯಂಗಡಿಯ ಕೊಪ್ಪಲ ಕರಿತೋಟದ ಆಣೆಕಟ್ಟು ಎಂಬ ನದಿಯ ದಡದಲ್ಲಿ ಆ ಯುವಕನ ಬಟ್ಟೆ ಮತ್ತು ಪಾದರಕ್ಷೆ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಮುಲ್ಕಿ ಪೊಲೀಸರು ಸ್ಥಳಕ್ಕೆ ಬಂದು ಆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ತೀವ್ರ ತನಿಖೆ ನಡೆಸುತ್ತಿದ್ದರು. ಸೆಪ್ಟೆಂಬರ್ 25 ರಂದು ನಮ್ಮ ಸಂಘಟನೆಯು ಮುಲ್ಕಿ ಪೊಲೀಸರನ್ನು ಸಂಪಕರ್ಿಸಿ ವಿಚಾರಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿತು. ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಸಂಘಟಕರು ವಿನಂತಿಸಿದಾಗ ಎಸ್.ಐ. ಯವರು ಇನ್ನು 2 ದಿವಸದಲ್ಲಿ ನಿಮ್ಮ ಮುಂದೆ ತಂದು ನಿಲ್ಲಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ನಾವು ಎಸಿಪಿ ಯವರಿಗೂ ಮನವಿ ಸಲ್ಲಿಸಿರುವೆವು. ಈ ಪ್ರಕರಣದ ಬಗ್ಗೆ ಮೂಡುತ್ತಿರುವ ಸಂಶಯಗಳು:
ಮೃತ ಯುವಕ ಸುಮಂತನಿಗೆ ಈಜು ಬರುತ್ತಿದ್ದು ನೀರಿನಲ್ಲಿ ಈಜಾಡುವ ಯುವ ಯುವಕ ನೀರಿನಲ್ಲಿ ಮುಳುಗಿ ಸಾಯಲು ಹೇಗೆ ಸಾಧ್ಯ?.
ಒಂಬತ್ತು ದಿನದ ನಂತರ ದಿನಾಂಕ ಸೆಪ್ಟೆಂಬರ್ 23 ರಂದು ಸುಮಂತನ ಬಟ್ಟೆ, ಪಾದರಕ್ಷೆ, ಮೊಬೈಲ್ ಆನೆಕಟ್ಟ ನದಿಯ ಬಳಿ ಪೋಲೀಸರು ವಶ ಪಡಿಸಿಕೊಂಡು ನಂತರ ಪೋಲೀಸರು ನದಿಯಲ್ಲಿ ಯಾಕೆ ಶೋಧ ಕಾರ್ಯ ನಡೆಸಲಿಲ್ಲ. ಪೋಲೀಸರಿಗೆ ಅಲ್ಲಿ ಇದ್ದಾನೆ ಇಲ್ಲಿ ಇದ್ದಾನೆ ಎಂದು ಹೇಳಿ ಸುಳ್ಳು ಮಾಹಿತಿ ನೀಡಿ ತನಿಖೆಯ ಹಾದಿ ತಪ್ಪಿಸಿದವರು ಯಾರು?
ಅವನ ಬಟ್ಟೆ ಹಾಗೂ ಸಾದರಕ್ಷೆ ಮತ್ತು ಮೊಬೈಲ್ ನದಿ ದಡದಲ್ಲಿ ದೊರಕಿರುವುದರಿಂದ ಅವನನ್ನು ಯಾರು ಅಪಹರಿಸಿ ಕೊಲೆ ನಡೆಸಿರಬಹುದು. ಆವನ ಬಳಿ ಮೊಬೈಲ್ ಇದ್ದುದರಿಂದ ಅವನು ಯಾರಿಗಾದರೂ ಮಾಹಿತಿ ನೀಡಬಹುದಿತ್ತು. ಅವನನ್ನು ಅಲ್ಲಿ ನೋಡಿದ್ದೇವೆ ಇಲ್ಲಿ ನೋಡಿದ್ದೇವೆ ಎಂದು ಮಾಹಿತಿ ನೀಡಿದ ಮಾಹಿತಿದಾರರು ತಿಳಿಸಿರುವುದರಿಂದ ಅವನು ಸಾಯಲು ಹೇಗೆ ಸಾಧ್ಯ? ಆದುದರಿಂದ ಅವನ್ನು ಯಾರು ಅಪಹರಿಸಿ ಕೊಲೆ ಮಾಡಿ ನದಿಗೆ ಬಿಸಾಡಿರಬಹುದೆಂದು ಅನುಮಾನಿಸಬಹುದು. ನದಿ ದಡದ ತೀರದಲ್ಲಿ ಆತನ ಬಟ್ಟೆ, ಪಾದರಕ್ಷೆ, ಮೊಬೈಲ್ ದೊರಕಿದಲ್ಲಿ ಪೋಲೀಸರು ಶೋಧ ಕಾರ್ಯ ನಡೆಸದಿರುವುದು ಪೊಲೀಸರ ನಿರ್ಲಕ್ಷತನವೇ ಕಾರಣ, ಈ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಮಾತ್ರವಲ್ಲದೆ ಆ ಬಡ ಕುಟುಂಬಕ್ಕೆ ಪರಿಹಾರವನ್ನು ದೊರಕಿಸಿಕೊಡಬೇಕು ಎಂದು ತಿಳಿಸಿದ್ದಾರೆ.

ಈ ಸಂದರ್ಭ ಸಂಸ್ಥೆಯ ಗೌರವಾಧ್ಯಕ್ಷ ಕೃಷ್ಣ ಬಂಗೇರ, ಮೂಲ್ಕಿ ತಾಲೂಕು ಶಾಖೆ ಅಧ್ಯಕ್ಷ ಶ್ರೀಪತಿ ಕೆರೆಕಾಡು, ಕಾರ್ಯದರ್ಶಿ ವಸಂತ ಪಾದೆಬೆಟ್ಟು, ಹಳೆಯಂಗಡಿ ಶಾಖಾ ಅಧ್ಯಕ್ಷ ಗಣೇಶ್ ಹಳೆಯಂಗಡಿ, ಸುಮಿತ್ರಾ

Leave a Reply

Your email address will not be published. Required fields are marked *

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

ನಾಟೇಕಲ್: ಮನೆ ಗೋಡೆಗೆ ಹಾರಿ ಬಡಿದ ಕಾರು; ಪಾರಾದ ಪ್ರಯಾಣಿಕರು….!

error: Content is protected !!